ಪುತ್ತೂರು: ಫೌಂಡೇಶನ್ ಇಂಡಿಯಾ ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮ
ಬಪತ್ತೂರು:- ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವ ಇ ಫೌಂಡೇಶನ್ ಇಂಡಿಯಾ(ಇ ಫ್ರೆಂಡ್ಸ್) ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮವು ಶನಿವಾರ ಸಂಸ್ಥೆಯ ಕಾರುಣ್ಯ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಯುನಿಟಿ ಶಮೀರ್ ಹಾಜಿ ಇವರು ಸಾಂಕೇತಿಕವಾಗಿ ಪುಸ್ತಕ ಹಾಗೂ ಬ್ಯಾಗ್ ಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ತಿಯಾಝ್ ಪಾರ್ಲೆ ಅವರು ಶಿಕ್ಷಣಕ್ಕೆ ಇ ಫ್ರೆಂಡ್ಸ್ ಪುತ್ತೂರು ನೀಡುತ್ತಿರುವ ಕೊಡುಗೆ ಮತ್ತು ಶೈಕ್ಷಣಿಕ ಪ್ರಗತಿ ಸಾಮುದಾಯಕ್ಕೆ ಅನಿವಾರ್ಯ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರಿಫ್ ಪಿ ಕೆ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಈ ಎಲ್ಲಾ ಕಲಿಕೆಯ ಸಲಕರಣೆಗಳು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ಎಲ್ಲರಿಗೂ ಮಾದರಿಯಾಗಬೇಕೆಂದು ಹೇಳಿದರು.
ವೇದಿಕೆಯಲ್ಲಿ ಉದ್ಯಮಿ ಖಲಂದರ್ ಶಾಫಿ ಬೊಲ್ಲಾನ, ಪಿ ಬಿ ಅಬ್ದುಲ್ಲಾ ಹಾಜಿ, ರಝಾಕ್ ಸಾಲ್ಮರ, ಪಡೀಲ್ ಜುಮಾ ಮಸೀದಿ ಅಧ್ಯಕ್ಷ ಆರ್ ಪಿ ಅಬ್ದುಲ್ ರಝಾಕ್, ಇ ಫ್ರೆಂಡ್ಸ್ ಕೋಶಾಧಿಕಾರಿ ಹೈದರ್ ಕೂರ್ನಡ್ಕ, ಕಾರ್ಯದರ್ಶಿ ನೌಶಾದ್ ಕೂರ್ನಡ್ಕ, ಪದಾಧಿಕಾರಿಗಳಾದ ಇಜಾಝ್ ಪುತ್ತೂರು, ರಿಯಾಝ್ ಝರಾ, ಆರಿಸ್, ಆಸೀಫ್ ಐಡಿಯಾ, ಆಸೀಫ್ ಅಜ್ಜಿಕಟ್ಟೆ, ಇಕ್ಬಾಲ್ ಚಮ್ಮಕ್, ಮುಝಮ್ಮಿಲ್ ಚಾಯ್ಸ್ ಉಪಸ್ಥಿತರಿದ್ದರು.