ದ.ಕ.ಜಿಲ್ಲೆಯಲ್ಲಿ ಸಾಧಾರಣ ಮಳೆ

Update: 2023-09-04 16:06 GMT

ಮಂಗಳೂರು, ಸೆ.4: ದ.ಕ. ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಚಾರ್ಮಾಡಿ, ಧರ್ಮಸ್ಥಳ, ಪುತ್ತೂರು ಸಹಿತ ಹಲವೆಡೆ ಸೋಮವಾರ ಸಾಧಾರಣ ಮಳೆಯಾಗಿದೆ. ಮುಂದಿನ 2 ದಿನ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಐಎಂಡಿ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಸೋಮವಾರ 6.3 ಸರಾಸರಿ ಮಿಮೀ ಮಳೆಯಾಗಿದೆ. ಈ ಪೈಕಿ ಮೂಡುಬಿದಿರೆ 5.3 ಮಿಮೀ, ಸುಳ್ಯ 6.2 ಮಿಮೀ, ಪುತ್ತೂರು 4.1 ಮಿಮೀ, ಮಂಗಳೂರು 1.8 ಮಿಮೀ, ಬೆಳ್ತಂಗಡಿ 7.1 ಮಿಮಿ, ಕಡಬ 1.7 ಮಿಮಿ, ಬಂಟ್ವಾಳ 6.5 ಮಿಮೀ ಮಳೆಯಾಗಿದೆ.

ಸೆ.6ರಿಂದ ಕರಾವಳಿ ಭಾಗಗಳಲ್ಲಿ ಮಳೆ ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಸೆ.6 ಮತ್ತು 7ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ.3ನೇ ವಾರದಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News