ಬೈಕಂಪಾಡಿ ಕೈಗಾರಿಕಾ ವಲಯ ರಸ್ತೆ ದುರಸ್ತಿಗೆ ಮನವಿ

Update: 2024-09-11 13:16 GMT

ಮಂಗಳೂರು, ಸೆ.11: ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆಯನ್ನು ದುರಸ್ಥಿತಿಗೊಳಿಸಬೇಕು ಎಂದು ಕೆನರಾ ಕೈಗಾರಿಕಾ ಸಂಘವು ಸರಕಾರಕ್ಕೆ ಮನವಿ ಮಾಡಿದೆ.

ಹಲವಾರು ವ್ಯವಹಾರಗಳ ಕಾರ್ಯನಿರ್ವಹಣೆ ಮತ್ತು ಸುಮಾರು 30,000 ಕಾರ್ಮಿಕರ ದೈನಂದಿನ ಪ್ರಯಾಣಕ್ಕೆ ಪ್ರಮುಖ ವಾದ ಈ ಪ್ರಮುಖ ಪ್ರವೇಶ ರಸ್ತೆಯು ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಸಮಸ್ಯೆ ಎದರಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಈ ರಸ್ತೆಯು ಒಳಪಟ್ಟಿದ್ದು, ಇದರ ದುರಸ್ತಿ ಬಗ್ಗೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ಚುನಾಯಿತ ಆಡಳಿತ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ರಸ್ತೆ ಹದಗೆಟ್ಟ ಪರಿಣಾಮ ಸರಕುಗಳು ಮತ್ತು ಸಿಬ್ಬಂದಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ವ್ಯವಹಾರಗಳ ಒಟ್ಟಾರೆ ಉತ್ಪಾದಕತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಮತ್ತು ಕೈಗಾರಿಕಾ ವಲಯದೊಳಗೆ ಸಾರಿಗೆಯ ಸುರಕ್ಷತೆ ಮತ್ತು ದಕ್ಷತೆ ಯನ್ನು ಖಚಿತಪಡಿಸಿಕೊಳ್ಳಲು ಸರಕಾರ ಕ್ರಮ ಜರುಗಿಸಬೇಕು ಎಂದು ಸಂಘ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News