ಅಳಕೆ ಮಾರುಕಟ್ಟೆಯಲ್ಲಿ ಬಾಡಿಗೆ ಪಾವತಿಸದ ಅಂಗಡಿಗಳ ಜಪ್ತಿ: ಮಂಗಳೂರು ಮನಪಾ ಕಟ್ಟುನಿಟ್ಟಿನ ಕ್ರಮ
Update: 2023-09-01 13:55 GMT
ಮಂಗಳೂರು, ಸೆ.1: ಮಂಗಳೂರು ಮಹಾನಗರ ಪಾಲಿಕೆಯ ಅಧೀನದ ನವೀಕೃತ ಅಳಕೆ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದಿರುವ 10 ಅಂಗಡಿ ವ್ಯಾಪಾರಿಗಳು ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ವರ್ಗ ಜಪ್ತಿ ಮಾಡಿದ್ದಾರೆ.
ಈ ಮಾರುಕಟ್ಟೆಯ 10 ಅಂಗಡಿ ವ್ಯಾಪಾರಿಗಳು ಈವರೆಗೆ ಬಾಡಿಗೆ ಪಾವತಿಸದ ಕಾರಣ ಅಧಿಕಾರಿಗಳು ಅಂಗಡಿಗಳನ್ನು ಜಪ್ತಿ ಮಾಡಿ, ಪಾಲಿಕೆ ಸುಪರ್ದಿಗೆ ಪಡಕೊಂಡರು.
ಹಲವು ಬಾರಿ ನೋಟಿಸ್ ನೀಡಿದ್ದರೂ ಬಾಡಿಗೆಯನ್ನು ಪಾವತಿಸದೆ ಪಾಲಿಕೆಗೆ ಸುಮಾರು 28 ಲಕ್ಷ ರೂ.ವನ್ನು ಬಾಕಿಯಿರಿಸಿ ಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಮಳಿಗೆಗಳನ್ನು ಸುಪರ್ದಿಗೆ ಪಡೆಯುವುದು ಅನಿವಾರ್ಯವಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಕಟ್ಟುನಿಟ್ಟಾದ ಈ ಕ್ರಮ ಕೈಗೊಂಡ ಪರಿಣಾಮವಾಗಿ ಬಾಡಿಗೆ ಪಾವತಿಸಲು ಮುಂದೆ ಬಂದಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.