ಪಡುಬಿದ್ರಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಪಡುಬಿದ್ರಿ: 2022ರ ವರದಿಯಂತೆ ದೇಶದಲ್ಲಿ ಒಂದು ಮಿಲಿಯ ಯುನಿಟ್ ರಕ್ತದ ಕೊರತೆ ಇತ್ತು. ಇದನ್ನು ನಿವಾರಿಸಬೇಕಾ ದಲ್ಲಿ ಇಂತಹ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಬಹಳಷ್ಟು ಅವಶ್ಯಕವಾಗಿವೆ ಎಂದು ಡಾ. ಪಯಸ್ವಿನಿ ಶೆಟ್ಟಿಗಾರ್ ಹೇಳಿದರು.
ರವಿವಾರ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಜೇಸಿಐ ಪಡುಬಿದ್ರಿ, ಹಠಯೋಗ ಶಿಕ್ಷಣ ಸಮಿತಿ ಪಡುಬಿದ್ರಿ, ಶ್ರೀ ಸುಬ್ರಹ್ಮಣ್ಯ ಯುವಕ-ಯುವತಿ ವೃಂದ ಪಾದೆಬೆಟ್ಟು, ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ವಲಯದ ಕ್ರಿಕೆಟ್ ತಂಡಗಳು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬೆಳ್ಮಣ್ ಪಡುಬಿದ್ರಿ ವಲಯ ಘಟ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಬ್ಲಢ್ ಬ್ಯಾಂಕ್‍ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಡುಬಿದ್ರಿ ಜೇಸಿಐ ಅಧ್ಯಕ್ಷೆ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ವಿಹಿಂಪ ಮತ್ತು ಬಜರಂಗದಳದ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಯುವಕ ವೃಂದದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಎಸೋಸಿಯೇಶನ್‍ನ ಗೌರವಾಧ್ಯಕ್ಷ ಶರತ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಉಡುಪಿ ಬ್ಲಡ್ ಬ್ಯಾಂಕ್‍ನ ಡಾ. ಮಂಜುಶ್ರೀ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪಡುಬಿದ್ರಿ ಅಧ್ಯಕ್ಷೆ ಪುಷ್ಪಲತಾ ಗಂಗಾಧರ್, ಶ್ರೀ ಸುಬ್ರಹ್ಮಣ್ಯ ಯುವತಿ ವೃಂದದ ಅಧ್ಯಕ್ಷೆ ಗೀತಾ ಪ್ರಭಾಕರ್ ವೇದಿಕೆಯಲ್ಲಿದ್ದರು. ಸಂತೃಪ್ತಿ ಮನೋಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ವಂದಿಸಿದರು. ಈ ಶಿಬಿರದ ಮೂಲಕ 56 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.