ಉಳ್ಳಾಲ: ಅಲೆಯ ರಭಸಕ್ಕೆ ಮೀನುಗಾರಿಕಾ ಸಾಮಗ್ರಿ ಸಮುದ್ರ ಪಾಲು

Update: 2024-12-13 06:55 GMT

ಉಳ್ಳಾಲ: ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೀನಿನ ಬಲೆ ಹಾಗೂ ದೋಣಿಯಲ್ಲಿದ್ದ ಮೀನುಗಾರಿಕಾ ಸಾಮಾಗ್ರಿಗಳು ಸಮುದ್ರ ಪಾಲಾದ ಘಟನೆ ಉಳ್ಳಾಲ ಅಳಿವೆ ಬಾಗಿಲು ಬಳಿ ನಡೆದಿದೆ.

ಬುಶ್ರಾ ರವರ ಮಾಲೀಕತ್ವದ ಗಿಲ್ ನೆಟ್ ದೋಣಿಯಲ್ಲಿ ಅವರ ಪತಿ ಕೋಡಿ ನಿವಾಸಿ ಇಸ್ಮಾಯಿಲ್, ಇಬ್ರಾಹಿಂ ಹಾಗೂ ಹಸನ್ ಎಂಬವರು ಮೀನುಗಾರಿಕೆ ಗೆಂದು ಉಳ್ಳಾಲ ಕೋಟೆಪುರ ಕೋಡಿಯಿಂದ ಅಳಿವೆಬಾಗಿಲು ಮೂಲಕ ತೆರಳಿದ್ದರು.

ಅಳಿವೆ ಬಾಗಿಲಿನಿಂದ ಸುಮಾರು 15 ನಾಟಿಕಲ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರಿಕೆ ನಡೆಸಲು ಹಾಕಿದ ಬಲೆ, ರೋಪ್ ಮತ್ತು ಬೋಯ್ ಗಳು ಅಲೆಯ ರಭಸಕ್ಕೆ ಸಮುದ್ರ ಪಾಲಾಗಿವೆ. ಇದನ್ನು ಟ್ರಾಲರ್ ಬೋಟು ಎಳೆದುಕೊಂಡು ಹೋಗಿದ್ದು, ಇದರಿಂದ 1.75000 ನಷ್ಟ ಸಂಭವಿಸಿರಬೇಕು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News