ವಿಧಾನ ಪರಿಷತ್ ಉಪ ಚುನಾವಣೆ: ಮೂಡುಬಿದಿರೆ ತಾಲೂಕಿನಲ್ಲಿ ಶೇ 100 ಮತದಾನ

Update: 2024-10-21 13:15 GMT

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೇಂದ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ (ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆಯವರೆಗೆ) ಶೇ 97.91 ಮತದಾರರು ಮತ ಚಲಾಯಿಸಿದ್ದಾರೆ. ಈ ಪೈಕಿ ಮೂಡುಬಿದಿರೆ ತಾಲೂಕಿನ ಎಲ್ಲಾ 216 ಮತದಾರರು ಮತ ಚಲಾಯಿಸುವ ಮೂಲಕ ಶೇ 100 ಮತ ಚಲಾವಣೆಯಾಗಿದೆ.

ಎರಡು ಜಿಲ್ಲೆಗಳ ಒಟ್ಟು 16 ತಾಲೂಕುಗಳಲ್ಲಿ 392 ಮತದಾನ ಕೇಂದ್ರಗಳಲ್ಲಿ ಒಟ್ಟು 5906 ಮಂದಿ ಮತ ಚಲಾಯಿಸಿದ್ದಾರೆ. ಈ ಪೈಕಿ 2839 ಗಂಡಸರು ಹಾಗೂ 3067 ಹೆಂಗಸರು ಮತ ಚಲಾಯಿಸಿದ್ದಾರೆ.

ಉಡುಪಿ, ದ.ಕ ಜಿಲ್ಲೆಯ ತಾಲೂಕುವಾರು ಮತ ಚಲಾಯಿಸಿದವರ ವಿವರ:-

ಬೈಂದೂರು 230, ಕುಂದಾಪುರ 540, ಬ್ರಹ್ಮಾವರ 423, ಉಡುಪಿ 361, ಕಾಪು 307, ಹೆಬ್ರಿ121, ಕಾರ್ಕಳ 413, ಮೂಡುಬಿದಿರೆ 216, ಮುಲ್ಕಿ 115, ಮಂಗಳೂರು 412, ಉಳ್ಳಾಲ 368, ಬಂಟ್ವಾಳ 787, ಬೆಳ್ತಂಗಡಿ 668, ಪುತ್ತೂರು 370, ಸುಳ್ಯ 293, ಕಡಬ 282 ಮತದಾರರು ಮತ ಚಲಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News