ಜಾಲ್ಸೂರು ಮತ್ತು ಮಂಡೆಕೋಲಿನಲ್ಲಿ ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

Update: 2024-01-07 16:30 GMT

ಸುಳ್ಯ: ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾಡಾನೆಗಳ ಹಿಂಡು ಶನಿವಾರ ರಾತ್ರಿ ಮಂಡೆಕೋಲು ಮತ್ತು ಜಾಲ್ಸೂರು ಗ್ರಾಮದ ಕೃಷಿಕರ ತೋಟಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ.

ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಕೃಷಿಕರ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಜಾಲ್ಸೂರು ಗ್ರಾಮದ ನಂಗಾರಿನಲ್ಲಿ ಕೃಷಿ ನಾಶಗೊಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ನಂಗಾರಿನ ಕೃಷಿಕ ರವಿಶಂಕರ್ ಭಟ್ ಅವರ ತೋಟದಲ್ಲಿ ಐದು ತೆಂಗಿನ ಮರ, ಅಡಿಕೆ, ಬಾಳೆ ಕೃಷಿ ನಾಶಗೊಳಿಸಿದೆ.

ಮಂಡೆಕೋಲಿನ ಸುತ್ತಮುತ್ತಲಿನ ಕಾಡುಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು ಶನಿವಾರ ರಾತ್ರಿ ಕೃಷಿ ತೋಟಕ್ಕೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದೆ. ಅಕ್ಕಪ್ಪಾಡಿಯ ಅಪ್ಪಯ್ಯ ಮಣಿಯಾಣಿ ಹಾಗೂ ವಿಶ್ವನಾಥ ಎಂಬವರ ತೋಟಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟಿದೆ. ಪರಿಣಾಮ ಅಡಿಕೆ, ಬಾಳೆ ಗಿಡ, ತೆಂಗು ಗಿಡಗಳನ್ನು ಪುಡಿಗಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News