ಮಹಿಳೆಗೆ ಹಲ್ಲೆ ಪ್ರಕರಣ : ಆರೋಪಿ ಬಂಧನ

Update: 2023-09-26 17:32 GMT

ಮಂಗಳೂರು, ಸೆ.26: ನಗರದ ಪಂಪ್‌ವೆಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿರುವ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಆಶಿಕ್ ಬಂಧಿತ ಆರೋಪಿ. ಸೆ.25ರಂದು ಈತ ತನ್ನ ತಾಯಿಯನ್ನು ದಾಖಲಿಸಲು ಆಸ್ಪತ್ರೆಗೆ ಬಂದಿದ್ದ. ಆಗ ಎಡ್ಮಿಷನ್ ಡೆಸ್ಕ್‌ನಲ್ಲಿ ಕರ್ತವ್ಯದಲ್ಲಿದ್ದ ಮಹಿಳೆ ರೋಗಿಯ ಹೆಸರು, ವಯಸ್ಸು, ವಿಳಾಸ ಮೊದಲಾದ ಮಾಹಿತಿ ಕೇಳಿದಾಗ ಕೋಪಗೊಂಡ ಆಶೀಕ್ ಅವಾಚ್ಯವಾಗಿ ನಿಂದಿಸಿದ್ದಾನೆ. ಎಡ್ಮಿಷನ್ ಡೆಸ್ಕ್‌ನಲ್ಲಿದ್ದ ಸೊತ್ತುಗಳನ್ನು ಹಾನಿಗೊಳಿಸಿದ್ದಾನೆ. ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಆಕೆಯ ಎದೆ ಮತ್ತು ಭುಜಕ್ಕೆ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News