ಮಧ್ಯಪ್ರದೇಶ ಪೊಲೀಸ್ ಶಸ್ತ್ರಾಗಾರದಿಂದ 200 ಬುಲೆಟ್‌ಗಳು ನಾಪತ್ತೆ
Update: 2024-12-08 17:08 GMT
ಮೊರೆನಾ: ಮಧ್ಯಪ್ರದೇಶ ಪೊಲೀಸರ ವಿಶೇಷ ಸಶಸ್ತ್ರಪಡೆಗಳ (ಎಸ್‌ಎಎಫ್) ಶಸ್ತ್ರಾಗಾರದಿಂದ 9 ಎಂಎಂ ಪಿಸ್ತೂಲ್‌ಗಳ ಹಾಗೂ ಸೆಲ್ಫ್‌ಲೋಡಿಂಗ್ ರೈಫಲ್‌ಗಳ 200 ಬುಲೆಟ್‌ಗಳನ್ನು ಕಳವುಗೈಯಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಕಳವು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿಶೇಷ ಸಶಸ್ತ್ರ ಪಡೆ (ಎಸ್‌ಎಎಫ್) ಬೆಟಾಲಿಯನ್‌ನ ಕಮಾಂಡಂಟ್‌ಗಳು ತಮ್ಮ ಕಂಪನಿ ಕಮಾಂಡರ್‌ಗಳ ಅಮಾನತುಗೊಳಿಸಿದ್ದಾರೆಂದು ಮೊರೆನಾ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಧಕಡ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.