ಶ್ರೀಲಂಕಾ ನೌಕಾಪಡೆಯಿಂದ 22 ಭಾರತೀಯ ಮೀನುಗಾರರ ಸೆರೆ
Update: 2023-11-19 17:52 GMT
ರಾಮನಾಥಪುರಂ(ತಮಿಳುನಾಡು),ನ.19: ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆ (ಐಎಂಬಿಎಲ್)ಯನ್ನು ಉಲ್ಲಂಘಿಸಿದ ಆರೋಪದಲ್ಲಿ ಇಲ್ಲಿಯ ಪಾಂಬನ್ ಪ್ರದೇಶದ 22 ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ನೌಕಾಪಡೆಯು ಅವರಿಗೆ ಸೇರಿದ ಎರಡು ದೋಣಿಗಳನ್ನು ವಶಪಡಿಸಿಕೊಂಡಿದೆ.
ಚಂಡಮಾರುತ ಎಚ್ಚರಿಕೆಯಿಂದಾಗಿ ಹಲವಾರು ದಿನಗಳ ವಿರಾಮದ ಬಳಿಕ ನ.15ರಂದು ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಶ್ರೀಲಂಕಾ ನೌಕಾಪಡೆಯು ಹಲವಾರು ದೋಣಿಗಳನ್ನು ಓಡಿಸಿತ್ತಾದರೂ ಎರಡು ದೋಣಿಗಳು ಮೀನುಗಾರಿಕೆಯನ್ನು ಮುಂದುವರಿಸಿದ್ದವು ಎನ್ನಲಾಗಿದೆ.
ಇದರೊಂದಿಗೆ ಶ್ರೀಲಂಕಾ ಈ ವರ್ಷ ಬಂಧಿಸಿರುವ ಭಾರತೀಯ ಮೀನುಗಾರರ ಸಂಖ್ಯೆ 196ಕ್ಕೇರಿದೆ.