ಮುಂಬೈ: ಎರಡು ಕುಟುಂಬಗಳ ಐವರು ಬಾಲಕಿಯರು ಒಂದೇ ದಿನ ನಾಪತ್ತೆ

Update: 2024-02-05 08:13 GMT

ಮುಂಬೈ: ನವಿ ಮುಂಬೈನ ತಲೋಜಾದಲ್ಲಿ ಒಂದೇ ದಿನ ಐವರು ಬಾಲಕಿಯರು ನಾಪತ್ತೆಯಾದ ಘಟನೆ ವರದಿಯಾಗಿದೆ. ಎರಡು ಕುಟುಂಬದ ಐವರು ಬಾಲಕಿಯರು ಒಂದೇ ದಿನ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ತಲೋಜಾ ಪ್ರದೇಶದ ಲಕ್ಕಿ ಕಾಂಪ್ಲೆಕ್ಸ್‌ನಿಂದ ನಾಪತ್ತೆಯಾಗಿರುವ ಬಾಲಕಿಯರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಶನಿವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದ 14 ಮತ್ತು 16 ವರ್ಷದ ಸಹೋದರಿಯರು ವಾಪಸ್ ಮನೆಗೆ ಬಂದಿಲ್ಲ. ಮತ್ತೊಂದು ಘಟನೆಯಲ್ಲಿ 5, 7 ಮತ್ತು 14 ವರ್ಷದ ಮೂವರು ಸಹೋದರಿಯರು ತಮ್ಮ ಮನೆಯಿಂದಲೇ ನಾಪತ್ತೆಯಾಗಿದ್ದಾರೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News