ನಮ್ಮ ಸಿಎಂ ಬಗ್ಗೆ ಮಾತನಾಡಿದರೆ ತೆಲಂಗಾಣದಲ್ಲಿ ನಿಮ್ಮ ಸಿನೆಮಾ ಪ್ರದರ್ಶನ ಮಾಡಲು ಬಿಡುವುದಿಲ್ಲ: ನಟ ಅಲ್ಲು ಅರ್ಜುನ್ ಗೆ ಕಾಂಗ್ರೆಸ್ ಶಾಸಕ ಎಚ್ಚರಿಕೆ

Update: 2024-12-25 07:33 GMT

ನಟ ಅಲ್ಲು ಅರ್ಜುನ್ (Photo: PTI)

ಹೈದರಾಬಾದ್ : ನಮ್ಮ ಸಿಎಂ ಬಗ್ಗೆ ಮಾತನಾಡಿದರೆ ತೆಲಂಗಾಣದಲ್ಲಿ ನಿಮ್ಮ ಸಿನೆಮಾ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ಶಾಸಕ ಆರ್ ಭೂಪತಿ ರೆಡ್ಡಿ ಅವರು ನಟ ಅಲ್ಲು ಅರ್ಜುನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಗ್ಗೆ ಟೀಕೆ ಮಾಡದಂತೆ ಮಂಗಳವಾರ ಎಚ್ಚರಿಕೆ ನೀಡಿರುವ ಶಾಸಕ ಆರ್ ಭೂಪತಿ ರೆಡ್ಡಿ, ನಟ ಅಲ್ಲು ಅರ್ಜುನ್ ಅವರ ಸಿನೆಮಾಗಳನ್ನು ರಾಜ್ಯದಲ್ಲಿ ಬಹಿಷ್ಕರಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

“ನೀವು (ಅಲ್ಲು ಅರ್ಜುನ್) ನಮ್ಮ ಮುಖ್ಯಮಂತ್ರಿಯ ಬಗ್ಗೆ ಮಾತನಾಡಿದರೆ, ಜಾಗರೂಕರಾಗಿರಿ. ನೀವು ಆಂಧ್ರದವರು. ನೀವು ಬದುಕಲು ಇಲ್ಲಿಗೆ ಬಂದಿದ್ದೀರಿ. ತೆಲಂಗಾಣಕ್ಕೆ ನಿಮ್ಮ ಕೊಡುಗೆ ಏನು? ನಿಮ್ಮ ಮಾತುಗಳನ್ನು ನೀವು ಸರಿಪಡಿಸಿಕೊಳ್ಳದಿದ್ದರೆ ತೆಲಂಗಾಣದಲ್ಲಿ ನಿಮ್ಮ ಸಿನೆಮಾಗಳ ಪ್ರದರ್ಶನಕ್ಕೆ ನಾವು ಬಿಡುವುದಿಲ್ಲ", ಎಂದು ಅವರು ಹೇಳಿದರು.

ಅಲ್ಲು ಅರ್ಜುನ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪವನ್ನು ಟೀಕಿಸಿದ ಶಾಸಕ ಆರ್ ಭೂಪತಿ ರೆಡ್ಡಿ, ಇದು ಸಾಮಾಜಿಕವಾಗಿ ಸಂದೇಶ ಸಾರದ "ಒಂದು ಕಳ್ಳಸಾಗಾಣಿಕೆದಾರರ ಕಥೆ" ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News