ಅಟಲ್ ಬಿಹಾರಿ ವಾಜಪೇಯಿ ಎರಡನೇ ಜವಾಹರಲಾಲ್ ನೆಹರೂ: ಸಂಜಯ್ ರಾವತ್
Update: 2024-12-25 11:11 GMT
ಮುಂಬೈ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 100ನೇ ಜನ್ಮದಿನದಂದು ಅವರನ್ನು ಪ್ರಶಂಸಿಸಿರುವ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್, ಅವರನ್ನು ಎರಡನೇ ಜವಾಹರಲಾಲ ನೆಹರೂ ಎಂದು ಬಣ್ಣಿಸಿದ್ದಾರೆ.
ಇಂದಿನ ಬಿಜೆಪಿಯು ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರ ಹೆಸರನ್ನು ಕೆಡಿಸುತ್ತಿರಬಹುದು ,ಆದರೆ ವಾಜಪೇಯಿ ಎರಡನೇ ನೆಹರು ಆಗಿದ್ದರು. ಅವರು ಕಾಂಗ್ರೆಸೇತರ ಪಕ್ಷಗಳ ನೆಹರು ಆಗಿದ್ದರು ಎಂದ ರಾವತ್,ನೆಹರೂ ಕೂಡ ವಾಜಪೇಯಿಯವರನ್ನು ಮೆಚ್ಚಿ ಆಶೀರ್ವದಿಸಿದ್ದರು ಎಂದು ಹೇಳಿದರು.
ವಾಜಪೇಯಿ ಕಠಿಣ ಹಿಂದುತ್ವವಾದಿಯಾಗಿದ್ದರೂ ದೇಶವು ಎಲ್ಲರಿಗೂ ಸೇರಿದ್ದು ಎಂದು ನಂಬಿದ್ದರು. ಎಲ್ಲ ಸದಾಚಾರಗಳನ್ನು ಮೈಗೂಡಿಸಿಕೊಂಡಿದ್ದ ಅವರು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ ಠಾಕ್ರೆಯವರ ಅಪಾರ ಗೌರವಕ್ಕೆ ಪಾತ್ರರಾಗಿದ್ದರು ಎಂದರು.
‘ರಾಜಧರ್ಮ’ಕ್ಕೆ ಬೆದರಿಕೆ ಎದುರಾದಾಗೆಲ್ಲ ದೇಶವು ವಾಜಪೇಯಿಯವರನ್ನು ನೆನಪಿಸಿಕೊಳ್ಳುತ್ತದೆ ಎಂದು ರಾವತ್ ಹೇಳಿದರು.