ದಿಲ್ಲಿಯಲ್ಲಿ 24 ಘಂಟೆ ನೀರು ಪೂರೈಕೆಗೆ ಕೇಜ್ರಿವಾಲ್ ಚಾಲನೆ

Update: 2024-12-24 16:01 GMT

ಅರವಿಂದ ಕೇಜ್ರಿವಾಲ್ | PC :  PTI 

ಹೊಸದಿಲ್ಲಿ : ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ರಾಷ್ಟ್ರ ರಾಜಧಾನಿಯ ರಾಜಿಂದರ್ ನಗರ ಪ್ರದೇಶದಲ್ಲಿಯ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಪಾಂಡವ ನಗರ ಫ್ಲ್ಯಾಟ್‌ಗಳಲ್ಲಿ ದಿನದ 24 ಗಂಟೆಯೂ ನೀರು ಪೂರೈಕೆಗೆ ಚಾಲನೆ ನೀಡಿದರು.

ದಿಲ್ಲಿಯ ಪ್ರತಿ ಕುಟುಂಬಕ್ಕೂ ದಿನದ 24 ಗಂಟೆಯೂ ಶುದ್ಧ ನೀರನ್ನು ಪೂರೈಸುವುದಾಗಿ ಆಪ್ 2020ರ ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಭರವಸೆ ನೀಡಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಅದರ ಅನುಷ್ಠಾನ ವಿಳಂಬಗೊಂಡಿತ್ತು. ಈಗ ಇಡೀ ದಿಲ್ಲಿ ನಗರದ ಜನರು ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರನ್ನು ಪಡೆಯಲಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದರು.

ಆಪ್ ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ ಎಂದು ಸೋಮವಾರ ಆರೋಪಿಸಿದ್ದ ಬಿಜೆಪಿ,ಈಡೇರದೆ ಉಳಿದಿರುವ ಭರವಸೆಗಳನ್ನು ಎತ್ತಿ ತೋರಿಸಿ ಅದರ ವಿರುದ್ಧ ‘ಚಾರ್ಜ್ ಶೀಟ್’ ಬಿಡುಗಡೆಗೊಳಿಸಿತ್ತು. ಇದರ ಮರುದಿನವೇ ಕೇಜ್ರಿವಾಲ್ ದಿನದ 24 ಗಂಟೆ ನೀರು ಪೂರೈಕೆಗೆ ಚಾಲನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News