ಕೇರಳದ ನೂತನ ರಾಜ್ಯಪಾಲರಾಗಿ ರಾಜೇಂದ್ರ ಅರ್ಲೇಕರ್ ನೇಮಕ | ಬಿಹಾರಕ್ಕೆ ಆರಿಫ್ ಖಾನ್

Update: 2024-12-24 16:44 GMT

ರಾಜೇಂದ್ರ ವಿಶ್ವನಾಥ್ ಅರ್ಲೇಕರ್ | PC : X/@rajendraarlekar

ಹೊಸದಿಲ್ಲಿ : ಬಿಹಾರದ ಮಾಜಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಒಡಿಶಾದ ರಾಜ್ಯಪಾಲ ಹುದ್ದೆಗೆ ರಘುಬರ್ ದಾಸ್ ಅವರ ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ ಬಳಿಕ ಹಲವಾರು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸಿದ್ದಾರೆ. ಪ್ರಮುಖ ಬದಲಾವಣೆಯಾಗಿ ಬಿಹಾರಕ್ಕೆ ಆರಿಫ್ ಖಾನ್ ಅವರನ್ನು ನೇಮಿಸಲಾಗಿದೆ.

ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮುಹಮ್ಮದ್ ಖಾನ್ ಅವರು ಇದೀಗ ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಹರಿಬಾಬು ಕಂಬಂಪತಿ ಅವರನ್ನು ಒಡಿಶಾದ ನೂತನ ರಾಜ್ಯಪಾಲರಾಗಿ ಹೆಸರಿಸಲಾಗಿದೆ. ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರದ ಹೊಸ ರಾಜ್ಯಪಾಲರಾಗಿ ಆಗಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News