ಜಮ್ಮು ಕಾಶ್ಮೀರ | ಸೇನಾ ವಾಹನ ಕಮರಿಗೆ ಬಿದ್ದು ಐವರು ಯೋಧರು ಮೃತ್ಯು

Update: 2024-12-24 15:30 GMT

Photo | indiatoday

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಐವರು ಯೋಧರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮಂಗಳವಾರ ಸಂಜೆ 5:40ರ ಸುಮಾರಿಗೆ ʼ11 ಮರಾಠಾ ಲಘು ಪದಾತಿ ದಳʼದ(11 ಎಂಎಲ್ಐ) ಸೇನಾ ವಾಹನವು ನಿಲಂ ಪ್ರಧಾನ ಕಚೇರಿಯಿಂದ ಎಲ್ ಒಸಿ ಮೂಲಕ ಬಲ್ನೋಯಿ ಘೋರಾ ಪೋಸ್ಟ್‌ ಗೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಘೋರಾ ಪೋಸ್ಟ್ ಬಳಿಯ ಕಮರಿಗೆ ಬಿದ್ದಿದೆ.  

ಗಾಯಗೊಂಡಿರುವ ಸೇನಾ ಸಿಬ್ಬಂದಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಘಾತವನ್ನು ವ್ಯಕ್ತಪಡಿಸಿದ್ದು, ಮಡಿದ ಯೋಧರ ಕುಟುಂಬಗಳಿಗೆ ಸಾಂತ್ವಾನವನ್ನು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News