ಚಂಡೀಗಢ ಮುನಿಸಿಪಾಲಿಟಿಯಲ್ಲಿ ಹೊಡೆದಾಡಿಕೊಂಡ ಬಿಜೆಪಿ, ಕಾಂಗ್ರೆಸ್-ಆಪ್ ಕೌನ್ಸಿಲರ್‌ಗಳು

Update: 2024-12-24 15:14 GMT

PC : PTI 

ಹೊಸದಿಲ್ಲಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ‘ಅಗೌರವ’ದ ಹೇಳಿಕೆಯ ಬಗ್ಗೆ ಚಂಡೀಗಢ ಮುನಿಸಿಪಾಲಿಟಿ ಕಾರ್ಪೊರೇಶನ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಹೊಡೆದಾಡಿಕೊಂಡರು.

ಕಳೆದ ವಾರ ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ನಡೆದ ಚರ್ಚೆಯ ವೇಳೆ ಅಂಬೇಡ್ಕರ್ ಬಗ್ಗೆ ಆಡಿರುವ ಮಾತುಗಳಿಗಾಗಿ ಅಮಿತ್ ಶಾ ರಾಜೀನಾಮೆ ನೀಡಬೇಕು ಒಂದು ಒತ್ತಾಯಿಸುವ ನಿರ್ಣಯವೊಂದನ್ನು ಕಾಂಗ್ರೆಸ್ ಮತ್ತು ಆಪ್ ಸದಸ್ಯರು ಅಂಗೀಕರಿಸಿದರು. ಅದನ್ನು ಬಿಜೆಪಿ ಸದಸ್ಯರು ವಿರೋಧಿಸಿದರು. ಆಗ ಇತ್ತಂಡಗಳ ನಡುವೆ ಘರ್ಷಣೆ ತಲೆದೋರಿತು. ಸದಸ್ಯರು ಹೊಡೆದಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅವರ ಹೊಡೆದಾಟದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News