17 ಮಂದಿ ಯಾತ್ರಾರ್ಥಿಗಳಿದ್ದ ದೋಣಿ ಮುಳುಗಡೆ: 6 ಮಂದಿ ನಾಪತ್ತೆ

Update: 2024-06-16 10:43 GMT

Screengrab:X/@ANI

ಪಾಟ್ನಾ: ರವಿವಾರ 17 ಮಂದಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಮುಳುಗಿರುವ ಘಟನೆ ಬಿಹಾರದ ಬರ್ಹ್ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶವು ಪಾಟ್ನಾದ ಬಳಿ ಇದೆ.

ಅಧಿಕಾರಿಗಳ ಪ್ರಕಾರ, ಈ ಘಟನೆಯು ಸಂಭವಿಸಿದಾಗ ದೋಣಿಯು ಉಮಾನಾಥ್ ಘಾಟ್ ನಿಂದ ದಿಯಾರಾಗೆ ಪ್ರಯಾಣ ಬೆಳೆಸುತ್ತಿತ್ತು. ಈ ಘಟನೆಯಲ್ಲಿ 6 ಮಂದಿ ನಾಪತ್ತೆಯಾಗಿದ್ದು, 11 ಮಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ವಿಭಾಗಾಧಿಕಾರಿ ಶುಭಂ ಕುಮಾರ್, “ಸಣ್ಣ ದೋಣಿಯೊಂದು ಮುಳುಗಡೆಯಾಗಿದೆ. ಈ ದೋಣಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 11 ಮಂದಿ ಸುರಕ್ಷಿತವಾಗಿದ್ದು, ಉಳಿದ 6 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ತೆರಳಿದ್ದು, ಅದು ಇನ್ನು ಕೊಂಚ ಹೊತ್ತಿನಲ್ಲೇ ಘಟನಾ ಸ್ಥಳಕ್ಕೆ ತಲುಪಲಿದೆ. ಶೋಧ ಕಾರ್ಯಾಚರಣೆಯು ಪ್ರಗತಿಯಲ್ಲಿದೆ” ಎಂದು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News