ಮೃತ ಫೆಲೆಸ್ತೀನಿ ಮಗುವನ್ನು “ಪ್ಲಾಸ್ಟಿಕ್ ಗೊಂಬೆ” ಎಂದ ಬಲಪಂಥೀಯ ಟ್ವಿಟರ್‌ ಖಾತೆ

Update: 2023-12-02 14:13 GMT

Image credit: X/@zoo_bear

ಹೊಸದಿಲ್ಲಿ: ಜನಪ್ರಿಯ ಬಲಪಂಥೀಯ ಟ್ವಿಟರ್‌ ಖಾತೆ ಮಿಸ್ಟರ್‌ ಸಿನ್ಹಾ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಾರೆ. ಆದರೆ ಈ ಮಿಸ್ಟರ್‌ ಸಿನ್ಹಾ ಹೆಸರಿನ ಟ್ವಿಟರ್‌ ಖಾತೆ ಶನಿವಾರ ಮೃತ ಫೆಲೆಸ್ತೀನಿ ಮಗುವೊಂದನ್ನು “ಪ್ಲಾಸ್ಟಿಕ್ ಗೊಂಬೆ”‌ ಎಂದು ಬಣ್ಣಿಸಿ ವಿವಾದಕ್ಕೀಡಾಗಿದೆ.

ಐದು ತಿಂಗಳು ಪ್ರಾಯದ ಮೃತ ಗಂಡು ಮಗುವನ್ನು ತಾಯಿಯೊಬ್ಬರು ಹಿಡಿದುಕೊಂಡಿರುವ ಫೋಟೋ ಶೇರ್‌ ಮಾಡಿರುವ ಸಿನ್ಹಾ, “ಅದೊಂದು ಪ್ಲಾಸ್ಟಿಕ್/ಆಟಿಕೆ ಮಗು. ಪ್ರಚಾರದ ಅತಿರೇಕ” ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್‌ ಅನ್ನು ಆಲ್ಟ್‌ ನ್ಯೂಸ್‌ ಸಹಸ್ಥಾಪಕ ಮುಹಮ್ಮದ್‌ ಝುಬೇರ್‌ ಗಮನಿಸಿ ಈ ಟ್ವಿಟರ್‌ ಖಾತೆಯಲ್ಲಿ ವಿವರಿಸಿರುವುದು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ಝುಬೇರ್‌ ಅವರು ಸಿನ್ಹಾ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಶೇರ್‌ ಮಾಡಿ, ಈ ಫೋಟೋದಲ್ಲಿ ಇಸ್ರೇಲಿ ವಾಯುದಾಳಿಗಳಿಗೆ ಬಲಿಯಾದ ಮುಹಮ್ಮದ್‌ ಹನಿ ಅಲ್-ಝಹರ್‌ ಎಂಬ ಐದು ತಿಂಗಳ ಮಗುವಿನ ಮೃತದೇಹ ಎಂದು ವಿವರಿಸಿದ್ದಾರೆ. ಸಮಸ್ಯೆಯ ಗಂಭೀರತೆಯ ಹೊರತಾಗಿಯೂ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದೂ ಝುಬೇರ್‌ ಹೇಳಿದ್ದಾರೆ.

ಈ ಹಿಂದೆ ಕೆಲ ಬಲಪಂಥೀಯ ಟ್ರೋಲ್‌ ಖಾತೆಗಳು ಮೃತ ಫೆಲೆಸ್ತೀನೀಯರ ಚಿತ್ರಗಳು ನಕಲಿ ಅವುಗಳು ಗೊಂಬೆಗಳು ಅಥವಾ ಪ್ಲಾಸ್ಟಿಕ್‌ ಮೂರ್ತಿಗಳು ಎಂದಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News