ಪತ್ನಿಯ ಹತ್ಯೆ ಆರೋಪ: ಕಾಂಗ್ರೆಸ್ ನಾಯಕನ ಬಂಧನ

Update: 2023-07-29 17:06 GMT

ಹೈದರಾಬಾದ್: ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ತೆಲಂಗಾಣದ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ 27 ವರ್ಷದ ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸರು ಕಾಂಗ್ರೆಸ್ ನಾಯಕ ವಲ್ಲಭ ರೆಡ್ಡಿಯನ್ನು ಜುಲೈ 26ರಂದು ಬಂಧಿಸಿದ್ದಾರೆ.

ಹೈದರಾಬಾದ್ನಲ್ಲಿರುವ ವಲ್ಲಭ ರೆಡ್ಡಿ ನಿವಾಸದಲ್ಲಿ ಜುಲೈ 14ರಂದು ವಲ್ಲಭ ರೆಡ್ಡಿ ಹಾಗೂ ಅವರ ಪತ್ನಿ ನಡುವೆ ಜಗಳ ನಡೆದಿತ್ತು. ಈ ಸಂದರ್ಭ ರೆಡ್ಡಿ ಪತ್ನಿಗೆ ಹಲ್ಲೆ ನಡೆಸಿದ್ದರು. ಲ್ಲದೆ, ಅವರ ತಲೆಯನ್ನು ಗೋಡೆ ಹಾಗೂ ಬಾಗಿಲಿಗೆ ಗುದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡು ಅವರು ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ವಲ್ಲಭ ರೆಡ್ಡಿ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಘೋಷಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿ ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಿಳೆಯ ತಂದೆ ಕೂಡ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಅನಂತರ ಆರಂಭದಲ್ಲಿ ಸಂಶಯದ ಸಾವಿನ ಪ್ರಕರಣ ದಾಖಲಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯ ಹೊಟ್ಟೆಯ ಒಳಗಿರುವ ಅವಯವಗಳಿಗೆ ಹಾನಿ ಉಂಟಾಗಿರುವುದು ಬೆಳಕಿಗೆ ಬಂದಿತ್ತು. ಅನಂತರ ಹತ್ಯೆ ಪ್ರಕರಣ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News