ಗಾಂಜಾ ಹೊಂದಿದ್ದ ಆರೋಪ: ಬಿಗ್ ಬಾಸ್ ಖ್ಯಾತಿಯ ಶಣ್ಮುಖ್ ಜಸ್ವಂತ್ ಬಂಧನ

Update: 2024-02-22 16:38 GMT

ಶಣ್ಮುಖ್ ಜಸ್ವಂತ್ | Photo: telugu.news18.com

ಹೈದರಾಬಾದ್: ಇಂದು (ಗುರುವಾರ) ಬಿಗ್ ಬಾಸ್ ತೆಲುಗು ಆವೃತ್ತಿಯ ಸ್ಪರ್ಧಿ ಶಣ್ಮುಖ್ ಜಸ್ವಂತ್ ಹಾಗೂ ಅವರ ಸಹೋದರ ಸಂಪತ್ ವಿನಯ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ವಿನಯ್ ಸಂಪತ್ ತನಗೆ ವಂಚಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ್ದ ದೂರನ್ನು ಆಧರಿಸಿ ಪೊಲೀಸ್ ಅಧಿಕಾರಿಗಳು ಅವರ ಫ್ಲ್ಯಾಟ್‌ಗೆ ತೆರಳಿದ್ದರು. ಅವರ ಫ್ಲ್ಯಾಟ್ ಅನ್ನು ತಪಾಸಣೆಗೊಳಪಡಿಸಿದಾಗ ಶಣ್ಮುಖ್ ಬಳಿ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ವೆಂಕಟ ರಮಣ ಗೌಡ, "ಸಂಪತ್ ನನ್ನನ್ನು ವಿವಾಹವಾಗುತ್ತೇನೆ ಎಂದು ಭರವಸೆ ನೀಡಿದ್ದ ಎಂದು ದೂರುದಾರರು ನರಸಿಂಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ, ತನ್ನ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿರುವ ಸಂಪತ್, ಈಗ ಮತ್ತೊಬ್ಬರನ್ನು ವಿವಾಹವಾಗಿದ್ದಾನೆ ಎಂದು ಆಕೆ ದೂರಿದ್ದರು. ಆಕೆಯ ದೂರನ್ನು ಆಧರಿಸಿ ಸಂಪತ್‌ರನ್ನು ಬಂಧಿಸಲು ಶಣ್ಮುಖ್ ನಿವಾಸಕ್ಕೆ ತೆರಳಿದಾಗ, ಶಣ್ಮುಖ್ ಬಳಿ ಮಾದಕ ದ್ರವ್ಯ ಇರುವುದು ಪತ್ತೆಯಾಗಿದ್ದರಿಂದ, ಅವರನ್ನೂ ಬಂಧಿಸಲಾಯಿತು. ಇಬ್ಬರನ್ನೂ ಪೊಲೀಸ್ ವಶಕ್ಕೆ ಕಳಿಸಲಾಗುವುದು" ಎಂದು ತಿಳಿಸಿದ್ದಾರೆ.

ಯೂಟ್ಯೂಬರ್ ಆದ ಶಣ್ಮುಖ್ ಜಸ್ವಂತ್, ನಟ ಹಾಗೂ 2021ರ ಬಿಗ್ ಬಾಸ್ ತೆಲುಗು ಆವೃತ್ತಿಯ ರನ್ನರ್ ಅಪ್ ಕೂಡಾ ಆಗಿದ್ದಾರೆ. ತಮ್ಮ ನೃತ್ಯದ ವಿಡಿಯೊಗಳಿಂದ ಜನಪ್ರಿಯರಾಗಿರುವ ಶಣ್ಮುಖ್, ಕೆಲವು ಕಿರು ಚಿತ್ರಗಳಲ್ಲೂ ನಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News