ಬಿಜೆಪಿ ಜೊತೆ ಮೈತ್ರಿ ವಿಚಾರ: NCP ವರಿಷ್ಠ ಶರದ್ ಪವಾರ್ ಹೇಳಿದ್ದೇನು?
ಮುಂಬೈ: ಬಿಜೆಪಿ ಜೊತೆ ತಾನು ಕೈಜೋಡಿಸುವುದಿಲ್ಲವೆಂದು ಎನ್ ಸಿ ಪಿ ವರಿಷ್ಠ ಶರದ್ ಪವಾರ್ ಅವರು ಮಂಗಳವಾರ ಪುಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ದಿಲ್ಲಿಯಲ್ಲಿ ತನ್ನನ್ನು ಭೇಟಿಯಾದ ಪುಣೆಯ NCP ಕಾರ್ಯಕರ್ತರ ನಿಯೋಗದೊಂದಿಗೆ ಅವರು ಮಾತನಾಡುತ್ತಿದ್ದರು. ಪಕ್ಷಕ್ಕಾಗಿ ದುಡಿಯುವಂತೆಯೂ ಅವರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.
NCP ಹಾಗೂ ಅದರ ಚಿಹ್ನೆಯು ಅಜಿತ್ ಪವಾರ್ ನೇತೃತ್ವದ ಬಣದ ಪಾಲಾಗಬೇಕೆಂದು ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ. ಆದರೆ ಬಿಜೆಪಿಯ ಆ ಸಂಚು ಯಶಸ್ವಿಯಾಗದೆಂದು ಅವರು ಹೇಳಿದರು
ತನ್ನ ಸೋದರನ ಪುತ್ರ, ಮಹಾರಾಷ್ಟ್ರದ ಡಿಸಿಎಂ ಆದ ಅಜಿತ್ ಪವಾರ್ ಅವರು NCP ಪಕ್ಷದ ಹೆಸರು ಹಾಗೂ ಅದರ ಚುನಾವಣಾ ಚಿಹ್ನೆಯನ್ನು ತನ್ನ ಬಣಕ್ಕೆ ನೀಡಬೇಕೆಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವ ಸಂದರ್ಭದಲ್ಲೇ ಪವಾರ್ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಜೊತೆ ಮೈತ್ರಿ ಏರ್ಪಡಿಸಿಕೊಂಡಿರುವುದಾಗಿ ಶರದ್ ಪವಾರ್ ಬಣ ಹೇಳಿಕೊಳ್ಳುತ್ತಿದೆ.