ವರದಕ್ಷಿಣೆಯಾಗಿ 30 ಲಕ್ಷ ರೂ. ಕೇಳಿದ ಪೊಲೀಸ್ ಪೇದೆ; ಮದುವೆ ರದ್ದುಗೊಳಿಸಿದ ವಧು

Update: 2024-11-16 13:35 GMT

ಸಾಂದರ್ಭಿಕ ಚಿತ್ರ (credit: freepik.com)

ಆಗ್ರಾ: ಮದುವೆಯ ವಿಧಿವಿಧಾನಗಳನ್ನು ಮುಂದುವರಿಸಲು ತನ್ನ ವಧುವಿನ ಕುಟುಂಬದಿಂದ 30 ಲಕ್ಷ ರೂ.ವರದಕ್ಷಿಣೆಗೆ ಬೇಡಿಕೆಯಿಟ್ಟ ಪೊಲೀಸ್ ಪೇದೆ ರವಿಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಕ್ಷಿಣೆ ಬೇಡಿಕೆಯನ್ನು ಈಡೇರಿಸದ ಹೊರತು ಮದುವೆ ಸಮಾರಂಭವನ್ನು ಮುಂದುವರಿಸಲು ವರ ನಿರಾಕರಿಸಿದ ಘಟನೆ ನವೆಂಬರ್ 13 ರ ರಾತ್ರಿ ನಡೆದಿದೆ.

ವರನ ಬೇಡಿಕೆಯಿಂದ ದಿಗ್ಭ್ರಮೆಗೊಂಡ ವಧು, ಮದುವೆಯನ್ನು ರದ್ದುಗೊಳಿಸಿ ಹೊರ ನಡೆದಿದ್ದಾಳೆ. ಪ್ರಕರಣದ ಕುರಿತಂತೆ ಗಾಜಿಯಾಬಾದ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ವಧುವಿನ ತಂದೆ ದೂರು ದಾಖಲಿಸಿದ್ದಾರೆ.

ʼದಿ ಟೈಮ್ಸ್ ಆಫ್ ಇಂಡಿಯಾʼದ ವರದಿಯ ಪ್ರಕಾರ, "ವರ್ಮಲಾ" ಎಂಬ ಮಾಲೆ ವಿನಿಮಯ ಸಮಾರಂಭದ ನಂತರ ವರ ಭಾರಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ. ವಧುವಿನ ಕುಟುಂಬವು ವರದಕ್ಷಿಣೆಗೆ ಸಂಬಂಧಿಸಿದ ಇತರ ಉಡುಗೊರೆಗಳು ಮತ್ತು ವೆಚ್ಚಗಳನ್ನು ಭರಿಸಿದ್ದರೂ, ವರ ಮದುವೆಯ ವಿಧಿವಿಧಾನಗಳೊಂದಿಗೆ ಮುಂದುವರಿಯುವ ಮೊದಲು ಪೂರ್ಣ ಮೊತ್ತವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಪರಿಸ್ಥಿತಿ ವಿಪರೀತಕ್ಕೆ ಹೋಗಿದ್ದು, ಗಂಟೆಗಟ್ಟಲೆ ಮಾತುಕತೆ ನಡೆಸಿದರೂ ವಧುವಿನ ಮನೆಯವರು ಬೇಡಿಕೆಗೆ ಮಣಿಯದೆ ಇರುವುದರಿಂದ ಸಮಾರಂಭ ಸ್ಥಬ್ಧಗೊಂಡಿದೆ.

ವರನ ವರ್ತನೆಯಿಂದ ಬೇಸತ್ತ ವಧು, ಆತನ ನಡತೆ ಸ್ವೀಕಾರಾರ್ಹವಲ್ಲ ಎಂದು ಹೇಳಿ ಮದುವೆಯನ್ನು ರದ್ದುಗೊಳಿಸಿ ತೆರಳಿದ್ದಾಳೆ ಎಂದು ವರದಿಯಾಗಿದೆ. ಗಾಜಿಯಾಬಾದ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ವಧುವಿನ ತಂದೆ ತಕ್ಷಣವೇ ಖಂಡೌಲಿ ಪೊಲೀಸರಿಗೆ ದೂರು ನೀಡಿದ್ದಾರೆ. ವರದಿಯ ಪ್ರಕಾರ, ವಧುವಿನ ತಂದೆ ತನ್ನ ದೂರಿನಲ್ಲಿ, ವರದಕ್ಷಿಣೆಯ ಭಾಗವಾಗಿ ಹಲವಾರು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ಇತರ ಉಪಕರಣಗಳು ಸೇರಿದಂತೆ ಮದುವೆಯ ಸಿದ್ಧತೆಗಳಿಗೆ ಸಾಕಷ್ಟು ಮೊತ್ತವನ್ನು ಖರ್ಚು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಇದರ ಹೊರತಾಗಿಯೂ, ಹೆಚ್ಚುವರಿ 30 ಲಕ್ಷಕ್ಕೆ ವರ ಇಟ್ಟ ಬೇಡಿಕೆಯು ಮದುವೆಯನ್ನು ರದ್ದುಗೊಳಿಸಲು ಕಾರಣವಾಯಿತು. ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 352 ಮತ್ತು 3 ಮತ್ತು 4 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News