AI ಬಳಸಿ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವ ಪ್ರಯತ್ನ: OpenAI

Update: 2024-06-01 05:30 GMT

Photo: X/TOI

ಹೊಸದಿಲ್ಲಿ: ಗುಪ್ತ ಕಾರ್ಯಾಚರಣೆಯ ಮೂಲಕ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸಿಕೊಂಡು ಭಾರತದಲ್ಲಿ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ನಡೆಸಿದ ಪ್ರಯತ್ನವನ್ನು ಅಡ್ಡಿಪಡಿಸಿರುವುದಾಗಿ ಓಪನ್ ಎಐ ಸ್ಫೋಟಕ ಹೇಳಿಕೆ ನೀಡಿದೆ. ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕೇವಲ ನಾಲ್ಕು ದಿನ ಇರುವಾಗ ಈ ಹೇಳಿಕೆ ಹೊರಬಿದ್ದಿದೆ.

ಓಪನ್ಎಐ ಬಹಿರಂಗಪಡಿಸಿರುವ ವರದಿಯಲ್ಲಿ ಇಸ್ರೇಲಿ ಬಾಡಿಗೆ ಕಂಪನಿಯೊಂದು ಭಾರತವನ್ನು ಕೇಂದ್ರೀಕರಿಸಿದ ಹೇಳಿಕೆಗಳನ್ನು ಸೃಷ್ಟಿಸಲು ಆರಂಭಿಸಿತ್ತು. ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿ, ವಿರೋಧ ಪಕ್ಷವಾದ ಕಾಂಗ್ರೆಸನ್ನು ಹೊಗಳಿತ್ತು ಎಂದು ವಿವರಿಸಿದೆ.

ಭಾರತೀಯ ಚುನಾವಣೆಯ ಮೇಳೆ ಪ್ರಭಾವ ಬೀರುವ ಈ ಚಟುವಟಿಕೆ ಮೇ ತಿಂಗಳಲ್ಲಿ ಆರಂಭವಾಗಿದ್ದು, ಇಸ್ರೇಲ್ನ ರಾಜಕೀಯ ಪ್ರಚಾರ ನಿರ್ವಹಣಾ ಸಂಸ್ಥೆಯಾದ ಎಸ್ಟಿಐಓಸಿ ಈ ಕಾರ್ಯಾಚರಣೆ ನಡೆಸಿತ್ತು ಎಂದು ವರದಿ ಹೇಳಿದೆ.

ಹಲವು ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಮೀಕ್ಷೆಗೆ ಅಥವಾ ರಾಜಕೀಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ರಹಸ್ಯ ಕಾರ್ಯಾಚರಣೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿತ್ತು ಎಂದು ಆಪಾದಿಸಿದೆ. "ಮೂರು ಮಂದಿ ನಮ್ಮ ಐಓ ಮಾದರಿಯನ್ನು ಬಳಸಿರುವುದು ಗಮನಕ್ಕೆ ಬಂದಿದೆ. ತಾವು ಯಾರು ಹಾಗೂ ಏನು ಸಾಧಿಸಲು ಹೊರಟಿದ್ದಾರೆ ಎಂಬ ವಿಚಾರದಲ್ಲಿ ಜನರನ್ನು ವಂಚಿಸಲು ಪ್ರಯತ್ನಿಸಿವೆ ಎಂದು ಬಹಿರಂಗಪಡಿಸಿದೆ.

ಈ ರಹಸ್ಯ ಕಾರ್ಯಾಚರಣೆಗೆ ವಿಷಯಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ಇಸ್ರೇಲ್ನಿಂದ ಕಾರ್ಯಾಚರಣೆ ನಡೆಸುವ ಕೆಲ ಖಾತೆಗಳು ಕೆಸಲ ಮಾಡಿವೆ. ಇವುಗಳನ್ನು ಎಕ್ಸ್, ಫೇಸ್ಬುಕ್, ಇನ್ಸ್ಟಾಗ್ರಾಂ, ವೆಬ್ಸೈಟ್ಗಳು ಮತ್ತು ಯೂಟ್ಯೂಬ್ ಮೂಲಕ ಪಸರಿಸಲಾಗಿದೆ ಎನ್ನುವುದು ವರದಿಯ ಸಾರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News