ಶರದ್ ಪವಾರ್ ಒಬಿಸಿ ಎಂದು ಹೇಳುವ ಪ್ರಮಾಣ ಪತ್ರ ವೈರಲ್; ನಕಲಿ ಎಂದ ಎನ್‌ಸಿಪಿ

Update: 2023-11-13 16:31 GMT

Photo : PTI 

ಮುಂಬೈ: ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರು ಎಂದು ಹೇಳುವ ಪ್ರಮಾಣ ಪತ್ರ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ.

ವೈರಲ್ ಆದ ಪ್ರಮಾಣ ಪತ್ರದಲ್ಲಿ ಪವಾರ್ ಅವರಿಗೆ ಸಂಬಂಧಿಸಿದ ವಿವರಗಳನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.

ಆದರೆ, ಎನ್‌ಸಿಪಿ ನಾಯಕಿ ಹಾಗೂ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ, ಈ ಪ್ರಮಾಣ ಪತ್ರದ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ ಹಾಗೂ ನಕಲಿ ಎಂದು ಕರೆದಿದ್ದಾರೆ. ‘‘ಇದು ಕೆಲವರ ಬಾಲಿಶತನ. ಶರದ್ ಪವಾರ್ ಅವರು 10ನೇ ತರಗತಿ ಕಲಿಯುತ್ತಿರುವಾಗ ಇಂಗ್ಲಿಷ್ ಮೀಡಿಯಂ ಶಾಲೆಗಳು ಎಲ್ಲಿದ್ದವು? ಜನರು ಈ ಬಗ್ಗೆ ಚಿಂತಿಸಬೇಕು’’ ಎಂದು ಅವರು ಹೇಳಿದ್ದಾರೆ.

ಶರದ್ ಪವಾರ್ ಅವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಪ್ರತಿಪಾದನೆಯನ್ನು ಶರದ್ ಪವಾರ್ ಅವರ ಬೆಂಬಲಿಗ ವಿಕಾಸ್ ಪಾಸಲ್ಕರ್ ಕೂಡ ತಿರಸ್ಕರಿಸಿದ್ದಾರೆ. ಪವಾರ್ ಅವರ ಜಾತಿ ಮರಾಠ ಎಂದು ದಾಖಲಿಸಿದ ಶಾಲೆಯ ಪ್ರಮಾಣ ಪತ್ರವನ್ನು ಅವರು ಹಾಜರುಪಡಿಸಿದ್ದಾರೆ.

‘‘ಇಂತಹ ನಕಲಿ ಪ್ರಮಾಣಪತ್ರಗಳನ್ನು ಬಳಸುವ ಮೂಲಕ ಶರದ್ ಪವಾರ್ ಅವರಂತಹ ದೊಡ್ಡ ನಾಯಕರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಪಿತೂರಿ ನಡೆಯುತ್ತಿದೆ. ಎನ್‌ಸಿಪಿ ಇದನ್ನು ಸಹಿಸುವುದಿಲ್ಲ’’ ಎಂದು ಪಾಸಲ್ಕರ್ ತಿಳಿಸಿದ್ದಾರೆ.

ಪುಣೆ ಬಾರಾಮತಿ ಜಿಲ್ಲೆಯ ಶಾಲೆಯ ಪ್ರಮಾಣ ಪತ್ರವನ್ನು ಪಾಸಲ್ಕರ್ ಶೇರ್ ಮಾಡಿದ್ದಾರೆ. ಇದರಲ್ಲಿ ಶರದ್ ಪವಾರ್ ಅವರು 1958 ಮಾರ್ಚ್ ನಲ್ಲಿ SSಅ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದು ಹೇಳಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News