ಎನ್ ಸಿಪಿ, ಕಾಂಗ್ರೆಸ್, ಶಿವಸೇನೆ ನಿರ್ಧರಿಸಿದರೆ ಮಹಾರಾಷ್ಟ್ರದಲ್ಲಿ ಬದಲಾವಣೆ ಸಾಧ್ಯ: ಶರದ್ ಪವಾರ್

Update: 2023-07-31 04:56 GMT

ಮುಂಬೈ: ತಮ್ಮ ಪಕ್ಷ, ಕಾಂಗ್ರೆಸ್ ಹಾಗೂ ಶಿವಸೇನೆ (ಯುಬಿಟಿ) ನಿರ್ಧರಿಸಿದರೆ ಮಹಾರಾಷ್ಟ್ರದಲ್ಲಿ ಬದಲಾವಣೆಗೆ ನಾಂದಿ ಹಾಡಬಹುದು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಎನ್ ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ (ಯುಬಿಟಿ) ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವನ್ನು ರಚಿಸಿಕೊಂಡಿವೆ.

ರವಿವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪವಾರ್ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಪ್ರಾಚೀನ ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸದ ಸಂರಕ್ಷಣೆಯಲ್ಲಿ ಹಿಂದಿನ ಸರಕಾರಗಳು ಹೇಗೆ ಸಹಾಯ ಮಾಡಿದ್ದವು ಎಂಬುದನ್ನು ಪವಾರ್ ಸ್ಮರಿಸಿದರು.

"ಆದರೆ ಈಗಿನ ರಾಜ್ಯ ಸರಕಾರದೊಂದಿಗೆ ನಾವು ತೊಡಗಿಸಿಕೊಳ್ಳುವುದು ಕಷ್ಟ. ಆದರೆ ಕೆಲವು ಪರಿಹಾರಗಳು ಹೊರಬರುತ್ತವೆ. ನಾವು ಮೂವರು (ಎಂವಿಎ ಪಕ್ಷಗಳು) ನಿರ್ಧರಿಸಿದರೆ, ಬದಲಾವಣೆ ಸಾಧ್ಯ" ಎಂದು ಅವರು ಪ್ರತಿಪಾದಿಸಿದರು.

ಅಜಿತ್ ಪವಾರ್ ಅವರ ಬಂಡಾಯದಿಂದಾಗಿ ಜುಲೈ 2ರಂದು ಎನ್ ಸಿಪಿ ವಿಭಜನೆಯಾದ ನಂತರ ಇದೇ ಮೊದಲ ಬಾರಿ, ಎಲ್ಲಾ ಮೂರು ಎಂವಿಎ ಮಿತ್ರಪಕ್ಷಗಳ ನಾಯಕರು ವೇದಿಕೆಯನ್ನು ಹಂಚಿಕೊಂಡರು.

ಜುಲೈ 2 ರಂದು, ಅಜಿತ್ ಪವಾರ್ ಹಾಗೂ ಇತರ ಎಂಟು ಎನ್ ಸಿಪಿ ಶಾಸಕರು ರಾಜ್ಯದಲ್ಲಿ ಏಕನಾಥ್ ಶಿಂಧೆ-ಬಿಜೆಪಿ ಸರಕಾರಕ್ಕೆ ಸೇರಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News