ಛತ್ತೀಸ್ಗಡ | ಭದ್ರತಾಪಡೆಗಳ ಎನ್‌ಕೌಂಟರ್ ಗೆ 7 ಮಾವೋವಾದಿಗಳ ಹತ್ಯೆ

Update: 2024-05-23 17:10 GMT

ಸಾಂದರ್ಭಿಕ ಚಿತ್ರ | PC : NDTV 

 

ನಾರಾಯಣಪುರ : ಛತ್ತೀಸ್ಗಡದ ನಾರಾಯಣಪುರ-ಬಿಜಾಪುರ್ ಅಂತರ್ಜಿಲ್ಲಾ ಗಡಿಯ ದಟ್ಟಾರಣ್ಯದಲ್ಲಿ ಗುರುವಾರ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ 7 ಮಾವೋವಾದಿಗಳನ್ನು ಹತ್ಯೆಗೈದಿವೆ.

ಭದ್ರತಾಪಡೆಗಳ ಜಂಟಿ ತಂಡವೊಂದು ಮಾವೋ ನಿಗ್ರಹ ಕಾರ್ಯಾಚರಣೆಗೆ ತೆರಳಿದ್ದಾಗ ಗುಂಡಿನ ಕಾಳಗ ಭುಗಿಲೆದ್ದಿತೆಂದು ನಾರಾಯಣಪುರ ಪೊಲೀಸ್ ಅಧೀಕ್ಷಕ (ಎಸ್ಪಿ) ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಏಳು ಮಂದಿ ಮಾವೋವಾದಿಗಳು ಸಾವನ್ನಪ್ಪಿದ್ದಾರೆಂದು ಎಸ್ಪಿ ತಿಳಿಸಿದ್ದಾರೆ.

ದಾಂತೆವಾಡ,ನಾರಾಯಣಪುರ ಹಾಗೂ ಬಸ್ತಾರ್ ಜಿಲ್ಲೆಗಳ ಮೀಸಲು ಕಾವಲು ದಳ, ಬಸ್ತಾರ್ ಫೈಟರ್ಸ್ ಹಾಗೂ ವಿಶೇಷ ಕಾರ್ಯಪಡೆ, ರಾಜ್ಯ ಪೊಲೀಸ್ ಘಟಕಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಪ್ರದೇಶದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಭದ್ರತಾಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದವು ಎಂದು ಪ್ರಭಾತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದವರು ಹೇಳಿದ್ದಾರೆ.

ಇಂದಿನ ಘಟನೆಯೊಂದಿಗೆ, ಈ ವರ್ಷ ಛತ್ತೀಸ್ಗಡದಲ್ಲಿ ಭದ್ರತಾಪಡೆಗಳೊಂದಿಗಿನ ಪ್ರತ್ಯೇಕ ಎನ್ಕೌಂಟರ್ ಕಾಳಗಗಳಲ್ಲಿ ಈವರೆಗೆ 112 ನಕ್ಸಲರು ಸಾವನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News