ಅಮೆರಿಕದಲ್ಲಿ ಅಪಘಾತಕ್ಕೀಡಾಗಿ ಕೋಮಾವಸ್ಥೆಯಲ್ಲಿರುವ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ ಕೊನೆಗೂ ದೊರೆತ ತುರ್ತು ವೀಸಾ

Update: 2025-02-28 12:25 IST
ಅಮೆರಿಕದಲ್ಲಿ ಅಪಘಾತಕ್ಕೀಡಾಗಿ ಕೋಮಾವಸ್ಥೆಯಲ್ಲಿರುವ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ ಕೊನೆಗೂ ದೊರೆತ ತುರ್ತು ವೀಸಾ

ನೀಲಂ ಶಿಂಧೆ (Photo credit: indiatoday.in) 

  • whatsapp icon

ಹೊಸದಿಲ್ಲಿ : ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅಮೆರಿಕದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಿದ್ಯಾರ್ಥಿನಿ ನೀಲಂ ಶಿಂಧೆ ಅವರ ಕುಟುಂಬಕ್ಕೆ ಅಮೆರಿಕಕ್ಕೆ ಭೇಟಿ ನೀಡಲು ತುರ್ತು ವೀಸಾವನ್ನು ಕಲ್ಪಿಸಲಾಗಿದೆ.

ಹಲವು ಬಾರಿ ನಿರಾಕರಣೆಯ ಬಳಿಕ ನೀಲಂ ಅವರ ತಂದೆ ಸೇರಿದಂತೆ ಇಬ್ಬರಿಗೆ ಅಮೆರಿಕಗೆ ತೆರಳಲು ವೀಸಾವನ್ನು ಕಲ್ಪಿಸಲಾಗಿದೆ. ನೀಲಂ ಅವರ ಸೋದರ ಸಂಬಂಧಿ ಗೌರವ್ ಕದಮ್ ಈ ಕುರಿತು ಪ್ರತಿಕ್ರಿಯಿಸಿ, ಫೆಬ್ರವರಿ 14ರಂದು ವೇಗವಾಗಿ ಬಂದ ಕಾರು ನೀಲಂ ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ಫೆಬ್ರವರಿ 16ರಂದು ನಮಗೆ ಕರೆ ಬಂದಿದೆ. ಹಲವು ಬಾರಿ ಮನವಿಯ ಬಳಿಕ ನಮಗೆ ವೀಸಾ ಸಿಕ್ಕಿದೆ. ಸಿಎಂ ದೇವೇಂದ್ರ ಫಡ್ನವಿಸ್ ಸೇರಿದಂತೆ ರಾಜಕಾರಣಿಗಳು ವೀಸಾ ಪಡೆಯಲು ನಮಗೆ ಸಹಾಯ ಮಾಡಿದರು. ನಾನು ನೀಲಂ ಅವರ ತಂದೆಯೊಂದಿಗೆ ನಾಳೆ ಅಮೆರಿಕಗೆ ತೆರಳಲಿದ್ದೇನೆ ಎಂದು ಹೇಳಿದ್ದಾರೆ.

ಅಪಘಾತದ ಬಳಿಕ ಕೋಮಾವಸ್ಥೆಯಲ್ಲಿರುವ ನೀಲಂ ಶಿಂಧೆ ಅವರ ತಲೆ, ಕೈ, ಕಾಲು ಮತ್ತು ಎದೆಗೆ ಗಂಭೀರ ಗಾಯಗಳಾಗಿವೆ. ಅವರಿಗೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯು ಈ ಬಗ್ಗೆ ಕುಟುಂಬಕ್ಕೆ ಇಮೇಲ್ ಮೂಲಕ ಮಾಹಿತಿ ನೀಡಿದೆ. ಆದಷ್ಟು ಬೇಗ ಯುಎಸ್‌ಗೆ ಬರುವಂತೆ ಕುಟುಂಬಸ್ಥರಲ್ಲಿ ಕೇಳಿಕೊಂಡಿದೆ. ಇದರಿಂದಾಗಿ ತಕ್ಷಣ ವೀಸಾ ಕಲ್ಪಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ಸರಕಾರಕ್ಕೆ ನೀಲಂ ಕುಟುಂಬವು ಮನವಿ ಮಾಡಿಕೊಂಡಿತ್ತು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News