ಔರಂಗಜೇಬ್ ಪ್ರಸ್ತುತವಲ್ಲ; ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ: ಆರೆಸ್ಸೆಸ್ ವಕ್ತಾರ ಸುನೀಲ್ ಅಂಬೇಕರ್

PC: ANI
ಹೈದರಾಬಾದ್: ಇಂದು ಔರಂಗಜೇಬ್ ಪ್ರಸ್ತುತವಲ್ಲ. ಯಾವುದೇ ರೀತಿಯ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಆರೆಸ್ಸೆಸ್ ವಕ್ತಾರ ಸುನೀಲ್ ಅಂಬೇಕರ್ ಬುಧವಾರ ಹೇಳಿದ್ದಾರೆ.
ಸಂಭಾಜಿನಗರದಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಇತರ ಸಂಘಟನೆಗೆಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಾಗಪುರದಲ್ಲಿ ಹಿಂಸಾಚಾರ ಭುಗಿಲೆದ್ದು ಉದ್ವಿಗ್ನವಾಗಿರುವ ನಡುವೆ ಸುನೀಲ್ ಅಂಬೇಕರ್ ಈ ಹೇಳಿಕೆ ನೀಡಿದ್ದಾರೆ.
ಆರೆಸ್ಸೆಸ್ ತನ್ನ ಶತಮಾನೋತ್ಸವನ್ನು ಆಚರಿಸಲು ಸಜ್ಜಾಗುತ್ತಿರುವ ಸಂದರ್ಭ ಸುನೀಲ್ ಅಂಬೇಕರ್ ಅವರು ಈ ಹೇಳಿಕೆ ಹೊರ ಬಿದ್ದಿದೆ. ಶತಮಾನೋತ್ಸವ ಆಚರಣೆಯಲ್ಲಿ ಆರೆಸ್ಸೆಸ್ ತನ್ನ ಶಾಖಾ ಘಟಕಗಳ ವಿಸ್ತರಣೆ ಕುರಿತು ಮೌಲ್ಯ ಮಾಪನ ಮಾಡಲಿದೆ.
ಈ ವರ್ಷ ವಿಜಯ ದಶಮಿಯಂದು ಆರೆಸ್ಸೆಸ್ 100 ವರ್ಷಗಳನ್ನು ಪೂರೈಸಲಿದೆ. 2025-26ರಿಂದ ಶತಮಾನೋತ್ಸವ ವರ್ಷ ಆಚರಿಸಲಿದೆ. ಶಾಖೆಗಳ ವಿಸ್ತರಣೆ ಹಾಗೂ ಇದನ್ನು ಹೇಗೆ ಸಾಧಿಸಲಾಯಿತು ಎಂದು ಮೌಲ್ಯ ಮಾಪನ ಮಾಡಲಾಗುತ್ತದೆ ಎಂದು ಅಂಬೇಕರ್ ಹೇಳಿದ್ದಾರೆ.