ಹರ್ಯಾಣ: ಜುಲಾನ ಕ್ಷೇತ್ರದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಗೆ ಗೆಲುವು

Update: 2024-10-08 07:37 GMT

Photo: PTI

ಹರ್ಯಾಣ: ಹರ್ಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಜುಲಾನ( Julana) ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಗೆಲುವನ್ನು ಸಾಧಿಸಿರುವ ಬಗ್ಗೆ ಕುಸ್ತಿಪಟು ಬಜರಂಗ್ ಪೂನಿಯಾ ಅಭಿನಂದಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಜರಂಗ್ ಪೂನಿಯಾ, ಈ ಹೋರಾಟವು ಜುಲಾನ ಕ್ಷೇತ್ರ ಅಥವಾ ಇತರ 3-4 ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಪಕ್ಷಗಳ ನಡುವಿನ ಹೋರಾಟ ಮಾತ್ರವಲ್ಲ, ಈ ಹೋರಾಟವು ದೇಶದ ಪ್ರಬಲ ದಮನಕಾರಿ ಶಕ್ತಿಗಳ ವಿರುದ್ಧವಾಗಿತ್ತು ಮತ್ತು ವಿನೇಶ್ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ಜುಲಾನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ವಿರುದ್ಧ ವಿನೇಶ್ ಪೋಗಟ್ 5000ಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News