ಸಲಹೆ ಪಡೆದು ವಿವಾದಾತ್ಮಕ ಪ್ರಸಾರ ಮಸೂದೆ ಮಂಡನೆ: ಸ್ಪಷ್ಟನೆ ನೀಡಿದ ಕೇಂದ್ರ ಸಚಿವ

Update: 2024-08-20 10:59 GMT

ಅಶ್ವಿನಿ ವೈಷ್ಣವ್ | PC : PTI 

ಹೊಸದಿಲ್ಲಿ: ವಿವಾದಾತ್ಮಕ ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆಯ ಕರಡನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದ್ದು, ಸಲಹೆಗಳನ್ನು ಪಡೆದ ಬಳಿಕವಷ್ಟೇ ಅದನ್ನು ಮಂಡಿಸಲಾಗುವುದು ಎಂದು ಕೇಂದ್ರ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸಂಬಂಧಪಟ್ಟ ಎಲ್ಲರ ಸಲಹೆಯನ್ನು ಪಡೆಯಲು ಸಚಿವಾಲಯ ಮುಂದಾಗಿದೆ. "ನಾವು ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದ್ದೇವೆ. ಸ್ಥಿತಿಸ್ಥಾಪಕತ್ವ ಹೊಂದಿದ್ದು, ಏನೇನು ಮಾಡಬಹುದೋ ಅದಕ್ಕೆ ಸಿದ್ಧರಿದ್ದೇವೆ. ವಿಭಿನ್ನ ಹಾಗೂ ವೈವಿಧ್ಯಮಯ ಅಭಿಪ್ರಾಯಗಳನ್ನು ಪಡೆದೇ ಅಂತಿಮಪಡಿಸಲಾಗುತ್ತದೆ" ಎಂದು ವೈಷ್ಣವ್ ಹೇಳಿದ್ದಾಗಿ ದ ಹಿಂದೂ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News