ಡಿಎಂಕೆ ಸಂಸದನಿಂದ ಸಚಿವ ಮುರುಗನ್ ವಿರುದ್ಧ ವಿವಾದಾತ್ಮಕ ಟೀಕೆ: ಲೋಕಸಭೆಯಲ್ಲಿ ಗದ್ದಲ

Update: 2024-02-06 15:40 GMT

ಮುರುಗನ್ | Photo: PTI 

ಹೊಸದಿಲ್ಲಿ: ಡಿಎಂಕೆ ಸಂಸದ ಟಿ.ಆರ್.ಬಾಲು ಅವರು ಮಂಗಳವಾರ ಕೇಂದ್ರ ಸಚಿವ ಎಲ್.ಮುರುಗನ್ ಅವರನ್ನು ಲೋಕಸಭೆಯಲ್ಲಿ ಟೀಕಿಸಿದ್ದು, ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ದಲಿತ ಸಮುದಾಯದ ಸಚಿವನನ್ನು ಅವಮಾನಿಸಿದ್ದಕ್ಕಾಗಿ ಡಿಎಂಕೆ ನಾಯಕ ಬಾಲು ಅವರು ಕ್ಷಮೆ ಕೋರಬೇಕೆಂದು ಬಿಜೆಪಿ ಸಂಸದರು ಪಟ್ಟುಹಿಡಿದರು.

ಆದರೆ ಬಾಲು ಅದಕ್ಕೆ ಒಪ್ಪದೆ ಇದ್ದಾಗ, ಅವರ ಹೇಳಿಕೆಗಳನ್ನು ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರು ಕಡತದಿಂದ ತೆಗೆದುಹಾಕಿದರು. ಇದನ್ನು ಪ್ರತಿಭಟಿಸಿ ಡಿಎಂಕೆ, ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ್ದರು.

ಪ್ರಶ್ನೋತ್ತರ ವೇಳೆಯ ಸಂದರ್ಭ ತಮಿಳುನಾಡಿನಲ್ಲಿ ಆಹಾರ ಪರಿಹಾರ ಕಾರ್ಯಕ್ರಮಗಳ ಕುರಿತಾಗಿ ಪೂರಕ ಪ್ರಶ್ನೆಯೊಂದನ್ನು ಕೇಳಿದ್ದರು. ಆಗ ತಮಿಳುನಾಡಿನವರೇ ಆದ ಕೇಂದ್ರ ಮೀನುಗಾರಿಕಾ, ಪಶುಸಂಗೋಪನಾ ಸಚಿವ ಎಲ್..ಮುರುಗನ್ ಅವರು ಮಧ್ಯಪ್ರವೇಶಿಸಿ ಸಂಸದ ಬಾಲು ಅಪ್ರಸಕ್ತವಾದ ಪ್ರಶ್ನೆಯನ್ನು ಕೇಳುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. , ಈ ಸಂದರ್ಭದಲ್ಲಿ ಬಾಲು ಅವರು ಮುರುಗನ್ ವಿರುದ್ಧ ವಿವಾದಾತ್ಮಕ ಟೀಕೆಯನ್ನು ಮಾಡಿದ್ದಾರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News