ದಿಲ್ಲಿ ವಿಮಾನ ನಿಲ್ದಾಣ: ಪ್ರತಿಕೂಲ ಹವಾಮಾನದಿಂದ ವಿಮಾನಗಳ ಹಾರಾಟ ವ್ಯತ್ಯಯ

Update: 2024-01-14 06:17 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರತಿಕೂಲ ಹವಾಮಾನದ ಕಾರಣಕ್ಕೆ ರವಿವಾರ ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಿಂದ ಏಳು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂಜಾನೆ 4.30ರಿಂದ 7.30ರ ನಡುವೆ ಆರು ವಿಮಾನಗಳ ಮಾರ್ಗವನ್ನು ಜೈಪುರಕ್ಕೆ ಬದಲಾಯಿಸಿದ್ದರೆ, ಒಂದು ವಿಮಾನದ ಮಾರ್ಗವನ್ನು ಮುಂಬೈಗೆ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಲವಾರು ಸ್ಥಳಗಳಲ್ಲಿ ಗೋಚರತೆಯ ಮಟ್ಟವು ಶೂನ್ಯ ಮೀಟರ್ ಗೆ ಕುಸಿದಿದ್ದು, ರವಿವಾರ ದಿಲ್ಲಿ ಹಾಗೂ ಉತ್ತರ ಭಾರತದ ಇನ್ನಿತರ ಭಾಗಗಳಲ್ಲಿ ದಟ್ಟ ಮಂಜು ಆವರಿಸಿದೆ.

ಜನರು ಅನಗತ್ಯ ಪ್ರಯಾಣವನ್ನು ತಡೆಯಬೇಕು ಹಾಗೂ ಚಾಲನೆ ಮಾಡುವಾಗ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದೆ.

ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದಟ್ಟ ಮಂಜು ಆವರಿಸಿದೆ ಎಂದು ಅದರ ಸಮೀಪ ನಿರ್ಮಿಸಲಾಗಿರುವ ಪಾಲಮ್ ವೀಕ್ಷಣಾಲಯವು ವರದಿ ಮಾಡಿದ್ದು, ಬೆಳಗ್ಗೆ 5 ಗಂಟೆ ಸಮಯದಲ್ಲಿ ಗೋಚರತೆಯ ಮಟ್ಟವು ಶೂನ್ಯ ಮೀಟರ್ ಗೆ ಕುಸಿದಿತ್ತು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News