ಫ್ಯಾಕ್ಟ್ ಚೆಕ್ ಮಾಡುವ ಮುಹಮ್ಮದ್ ಝುಬೇರ್ ಅವರ ಖಾತೆಯನ್ನು ತೆಗೆದುಹಾಕುವಂತೆ ಎಕ್ಸ್ ಗೆ ಹೇಳಿದ ದಿಲ್ಲಿ ಪೊಲೀಸರು

Update: 2024-06-13 14:46 GMT

ಮುಹಮ್ಮದ್ ಝುಬೇರ್ PC : X/@zoo_bear

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಮ್ಮ ಖಾತೆಯನ್ನು ತೆಗೆದುಹಾಕುವಂತೆ ಎಕ್ಸ್ ಗೆ ದಿಲ್ಲಿ ಪೊಲೀಸರು ಸೂಚಿಸಿರುವ ಈ ಮೇಲ್ ಅನ್ನು ಫ್ಯಾಕ್ಟ್ ಚೆಕ್ ಮಾಡುವ ಪತ್ರಕರ್ತ ಮುಹಮ್ಮದ್ ಝುಬೇರ್ ಅವರು ಬಹಿರಂಗಪಡಿಸಿದ್ದಾರೆ.

ಫ್ಯಾಕ್ಟ್ ಚೆಕ್ ಮಾಡುವ ವೇದಿಕೆ Alt News ನ ಸಹ-ಸಂಸ್ಥಾಪಕರಾದ ಜುಬೈರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರಿಗೆ ಎಕ್ಸ್ ನಲ್ಲಿ 11 ಲಕ್ಷ ಫಾಲೋವರ್ ಗಳಿದ್ದಾರೆ. ಅವರ ಕೆಲವು ಪೋಸ್ಟ್ ಗಳು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಎಕ್ಸ್ಗೆ ದಿಲ್ಲಿ ಪೊಲೀಸರು ಕಳುಹಿಸಿರುವ ಈ ಮೇಲ್ ನಲ್ಲಿ ತಿಳಿಸಲಾಗಿದೆ.

ಝುಬೈರ್ ಕಾನೂನು ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. 2022 ರಲ್ಲಿ, 1983 ರ ಹಿಂದಿ ಚಲನಚಿತ್ರದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ 2018ರ ಟ್ವೀಟ್‌ಗಾಗಿ, “ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ" ಎಂದು ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಸೆರೆವಾಸದಲ್ಲಿದ್ದ ಅವರಿಗೆ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News