ಬಿಜೆಪಿ ಸೇರಿದ ಎಂಟು ಮಂದಿ ಕಾಂಗ್ರೆಸ್ ಶಾಸಕರ ಅನರ್ಹತೆ ಅರ್ಜಿ ವಜಾ

Update: 2024-11-02 04:18 GMT

ಗೋವಾ ಸ್ಪೀಕರ್ ರಮೇಶ್ ತಾವಡ್ಕರ್  PC: x.com/htTweets

ಪಣಜಿ: ಕಾಂಗ್ರೆಸ್ ಪಕ್ಷವನ್ನು ತೊರೆದು 2022ರ ಸೆಪ್ಟೆಂಬರ್ 14ರಂದು ಬಿಜೆಪಿ ಸೇರಿದ ಎಂಟು ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಗೋವಾ ಸ್ಪೀಕರ್ ರಮೇಶ್ ತಾವಡ್ಕರ್ ಶುಕ್ರವಾರ ವಜಾಗೊಳಿಸಿದ್ದಾರೆ.

ಈ ಪ್ರಕರಣ 2022ರ ಸೆಪ್ಟೆಂಬರ್ 14ರಂದು ನಡೆದ ಡೊಮಿನಿಕ್ ನೊರೋನ್ಹಾ ವರ್ಸಸ್ ದಿಗಂಬರ ಕಾಮತ್ ಪ್ರಕರಣವನ್ನು ಹೋಲುವ ಪ್ರಕರಣವಾಗಿದೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ಸ್ಪೀಕರ್ ಈ ಅರ್ಜಿಯನ್ನು ವಜಾಗೊಳಿಸಿದ್ದರು.

"ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ವಿರುದ್ಧ ಮೂರನೇ ಎರಡರಷ್ಟು ಶಾಸಕರು ಬಂಡೆದ್ದರೆ ಅಂಥ ಪ್ರಕರಣದಲ್ಲಿ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ" ಎಂದು ನರ್ಹೋನಾ ವರ್ಸಸ್ ಕಾಮತ್ ಪ್ರಕರಣದಲ್ಲಿ ತಾವಡ್ಕರ್ ಸ್ಪಷ್ಟಪಡಿಸಿದ್ದರು.

ಮುಂಬೈ ಹೈಕೋರ್ಟ್ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅದರ ಅನುಸಾರ ಪ್ರತಿವಾದಿಗಳನ್ನು ಅನರ್ಹಗೊಳಿಸಲು ಸಕಾರಣಗಳು ಕಾಣುತ್ತಿಲ್ಲ ಎಂದು ಸ್ಪೀಕರ್ ತೀರ್ಪು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಿರೀಶ್ ಚೋಡನ್ಕರ್, ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಮೈಕೆಲ್ ಲೋಬೊ, ದಿಗಂಬರ ಕಾಮತ್, ಅಲೆಕ್ಸಿ ಸೀಕ್ವೇರಾ, ಸಂಕಲ್ಪ್ ಅಮೋನ್ಕರ್, ದೆಲಿಲಹ್ ಹೋಬೊ, ಕೇದಾರ್ ನಾಯ್ಕ, ರಾಜೇಶ್ ಫಲದೇಸಾಯಿ ಮತ್ತು ರೊಡೊಲ್ಫೋ ಫೆರ್ನಾಂಡೀಸ್ ಅವರ ಅನರ್ಹತೆಗೆ ಅರ್ಜಿ ಸಲ್ಲಿಸಿದ್ದರು. 2022ರ ಮಾರ್ಚ್ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದಿದ್ದರು.

ತಮ್ಮದು ಪಕ್ಷಾಂತರವಲ್ಲ, ನಮ್ಮ ಬಣ ಬಿಜೆಪಿಯಲ್ಲಿ ವಿಲೀನವಾಗಿದೆ ಎಂದು ಶಾಸಕರು ಪ್ರತಿಪಾದಿಸಿದ್ದರು. ಶಾಸಕರು ಸ್ವಯಂಪ್ರೇರಿತರಾಗಿ ಪಕ್ಷದ ಸದಸ್ಯತ್ವ ತೊರೆದಿರುವುದರಿಂದ ಅನರ್ಹಗೊಳಿಸಬೇಕು ಎಂದು ಚೋಡನ್ಕರ್ ಪರ ವಕೀಲ ಅಭಿಜಿತ್ ಗೋಸಾಯಿ ವಾದಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News