ಅಸ್ಸಾಂನಲ್ಲಿ 11 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ
ಗುವಾಹಟಿ: ಅಸ್ಸಾಂನ ಕಚರ್ ಹಾಗೂ ಕಬ್ರಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 11 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
ಸೋಮವಾರ ತಡ ರಾತ್ರಿ ಪೊಲೀಸರು ಕಚರ್ ಜಿಲ್ಲೆಯ ದಿಘರ್ ಫುಲೆಟ್ರಾಲ್ ಪ್ರದೇಶದಿಂದ 5.1 ಕೋಟಿ ರೂ. ಮೌಲ್ಯದ 1.17 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಧನೇಹರಿಯಿಂದ 38 ಲಕ್ಷ ರೂ. ಮೌಲ್ಯದ 73.97 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನೆರೆಯ ರಾಜ್ಯದಿಂದ ಬರುತ್ತಿದ್ದ ಬಸ್ ಅನ್ನು ದಿಲ್ಲೈ ತಿನ್ಲೈ ಬಳಿ ತಡೆ ಹಿಡಿದಿರುವ ಪೊಲೀಸ್ ಅಧಿಕಾರಿಗಳು, ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಬಸ್ ನಿಂದ 6 ಕೋಟಿ ರೂ. ಮೌಲ್ಯದ 1.22 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಮಾದಕ ದ್ರವ್ಯಗಳ ಒಟ್ಟಾರೆ ಮೌಲ್ಯ 11 ಕೋಟಿ ರೂ. ಆಗಿದೆ. ಅಸ್ಸಾಂ ಪೊಲೀಸ್ ಇಲಾಖೆಯ ಘಟಕಗಳ ಮೂರು ಪ್ರತ್ಯೇಕ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಯಲ್ಲಿ ಈ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ಪೊಲೀಸರಿಂದ ಉತ್ತರ ಕೆಲಸವಾಗಿದೆ” ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಶ್ಲಾಘಿಸಿದ್ದಾರೆ.