ಎನ್ಸಿಪಿ ವರಿಷ್ಠ ಶರದ ಪವಾರ್ ಮೊಮ್ಮಗನ ಬಾರಾಮತಿ ಕಂಪನಿಯ ಮೇಲೆ ಈಡಿ ದಾಳಿ

Update: 2024-01-05 16:29 GMT

ಶರದ ಪವಾರ್ ̧, ರೋಹಿತ ಪವಾರ್ | Photo: PTI 

ಮುಂಬೈ: ಜಾರಿ ನಿರ್ದೇಶನಾಲಯ (ಈಡಿ)ವು ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣದಲ್ಲಿ ತನ್ನ ತನಿಖೆಯ ಅಂಗವಾಗಿ ಶುಕ್ರವಾರ ಎನ್ಸಿಪಿ ವರಿಷ್ಠ ಶರದ ಪವಾರ್ ಅವರ ಮೊಮ್ಮಗ ಹಾಗೂ ಶಾಸಕ ರೋಹಿತ ಪವಾರ್ ಒಡೆತನದ ಬಾರಾಮತಿ ಆಗ್ರೋ ಕಂಪನಿ ಮತ್ತು ಸಂಬಂಧಿಸಿದ ಸಂಸ್ಥೆಗಳ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಾರಾಮತಿ, ಪುಣೆ, ಔರಂಗಾಬಾದ್ ಮತ್ತು ಅಮರಾವತಿಯ ಕನಿಷ್ಠ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಬಾರಾಮತಿ ಪಟ್ಟಣದಲ್ಲಿರುವ ಬಾರಾಮತಿ ಆಗ್ರೋದ ಕಚೇರಿಯ ಮೇಲೆಯೂ ಈಡಿ ದಾಳಿ ನಡೆದಿದೆ.

ಮುಂಬೈ ಪೋಲಿಸ್ ಆರ್ಥಿಕ ಅಪರಾಧಗಳ ಘಟಕದ ಆಗಸ್ಟ್ 2019ರ ಎಫ್ ಐ ಆರ್ ಆಧಾರದಲ್ಲಿ ಈಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಮಹಾರಾಷ್ಟ ಸಹಕಾರಿ ಕ್ಷೇತ್ರದಲ್ಲಿಯ ಸಕ್ಕರೆ ಕಾರ್ಖಾನೆಗಳನ್ನು ಕಪಟ ಮಾರ್ಗಗಳ ಮೂಲಕ ಅಗ್ಗದ ಬೆಲೆಗಳಲ್ಲಿ ಮಾರಾಟ ಮಾಡಲಾಗಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುವಂತೆ ಬಾಂಬೆ ಉಚ್ಛ ನ್ಯಾಯಾಲಯವು 2019, ಆ.22ರಂದು ಆದೇಶಿಸಿದ ಬಳಿಕ ಪೋಲೀಸ್ ದೂರು ದಾಖಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News