ಶಾಪಿಂಗ್‌ ಕಾಂಪ್ಲೆಕ್ಸ್‌ ನಲ್ಲಿ ಬೆಂಕಿ: ಮೂರನೇ ಅಂತಸ್ತಿನಿಂದ ಜಿಗಿದ ವ್ಯಕ್ತಿ

ಗ್ರೇಟರ್‌ ನೋಯ್ಡಾದ ಗ್ಯಾಲಕ್ಸಿ ಪ್ಲಾಝಾ ಶಾಪಿಂಗ್‌ ಕಾಂಪ್ಲೆಕ್ಸ್‌ ನಲ್ಲಿ ಘಟನೆ ಸಂಭವಿಸಿದ್ದು, ಶಾರ್ಟ್‌ ಸರ್ಕ್ಯೂಟ್‌ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕೃತರು ತಿಳಿಸಿದ್ದಾರೆ.

Update: 2023-07-13 10:49 GMT
Editor : Muad | Byline : ವಾರ್ತಾಭಾರತಿ

Photo: PTI

ನೋಯ್ಡಾ: ಇಲ್ಲಿನ ಶಾಪಿಂಗ್‌ ಕಾಂಪ್ಲೆಕ್ಸ್‌ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಈ ವೇಳೆ ಮೂರನೇ ಅಂತಸ್ತಿನಿಂದ ವ್ಯಕ್ತಿಯೊಬ್ಬ ಜಿಗಿಯುತ್ತಿರುವುದು ಮತ್ತು ಜನರು ರಕ್ಷಣೆಗಾಗಿ ನೇತಾಡುತ್ತಿರುವ ವೀಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಗ್ರೇಟರ್‌ ನೋಯ್ಡಾದ ಗ್ಯಾಲಕ್ಸಿ ಪ್ಲಾಝಾ ಶಾಪಿಂಗ್‌ ಕಾಂಪ್ಲೆಕ್ಸ್‌ ನಲ್ಲಿ ಘಟನೆ ಸಂಭವಿಸಿದ್ದು, ಶಾರ್ಟ್‌ ಸರ್ಕ್ಯೂಟ್‌ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕೃತರು ತಿಳಿಸಿದ್ದಾರೆ.


ಬೆಂಕಿಯ ಹೊಗೆ ದಟ್ಟವಾಗುತ್ತಿದ್ದಂತೆಯೇ ಜನರು ಮೂರನೇ ಅಂತಸ್ತಿನ ಕಿಟಕಿಯಿಂದ ನೇತಾಡುತ್ತಿರುವುದು ಮತ್ತು ಜಿಗಿಯುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಸದ್ಯ ರಕ್ಷಣಾ ಕಾರ್ಯಾಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News