ಉಕ್ಕು ಘಟಕದಲ್ಲಿ ಅಗ್ನಿ ಅನಾಹುತ: ನಾಲ್ವರು ಕಾರ್ಮಿಕರು ಸಜೀವ ದಹನ

Update: 2025-01-01 02:14 GMT

ಸೂರತ್: ಇಲ್ಲಿನ ಉಕ್ಕು ಘಟಕವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನಾಲ್ಕು ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಮತ್ತೊಬ್ಬ ಕಾರ್ಮಿಕ ತೀವ್ರ ಗಾಯಗೊಂಡಿದ್ದಾರೆ.

ಆರ್ಸೆಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಘಟಕದಲ್ಲಿ ಈ ದುರಂತ ಸಂಭವಿಸಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ.

ಉರಿಯುತ್ತಿದ್ದ ಕಲ್ಲಿದ್ದಲು ಸೋರಿಕೆಯಾಗಿ ಘಟಕದ ಒಂದು ಭಾಗಕ್ಕೆ ಬೆಂಕಿ ತಗುಲಿದೆ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿ ಕಾರ್ಮಿಕರು ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಅವರೆಲ್ಲರೂ ಸುಟ್ಟು ಕರಕಲಾದರು" ಎಂದು ವಿವರಿಸಿದ್ದಾರೆ. ಪೊಲೀಸರು ಹಾಗೂ ಫ್ಯಾಕ್ಟರಿ ಇನ್ಸ್ಪೆಕ್ಟರ್ ತನಿಖೆ ಮುಂದುವರಿಸಿದ್ದಾರೆ.

ಆದರೆ ಈ ವರೆಗೆ ಯಾವುದೇ ಆಕಸ್ಮಿಕ ಸಾವಿರ ಪ್ರಕರಣ ದಾಖಲಾಗಿಲ್ಲ ಎಂದು ಹಝಿರಾ ಠಾಣೆಯ ಅಧಿಕಾರಿ ಹೇಳಿದ್ದಾರೆ. ಮೃತಪಟ್ಟ ನಾಲ್ಕು ಮಂದಿಯ ಪೈಕಿ ಮೂರು ಶವಗಳನ್ನು ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ ಎಂದು ಹೇಳಲಾಗಿದೆ.

ಕೊರೆಕ್ಸ್ ಘಟಕದಲ್ಲಿ ಸಾಧನ ವೈಫಲ್ಯದಿಂದ ಈ ದುರಂತ ಸಂಭವಿಸಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಮುಚ್ಚಿದ್ದ ಘಟಕವನ್ನು ಮಂಗಳವಾರ ಸಂಜೆ 6 ಗಂಟೆಯ ವೇಳೆಗೆ ಮತ್ತೆ ಕಾರ್ಯಾರಂಭ ಮಾಡಲು ಮುಂದಾದಾಗ ಈ ದುರಂಗ ಸಂಭವಿಸಿದೆ. ಲಿಫ್ಟ್ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಕಂಪನಿಯ ನಾಲ್ವರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News