ಲೋಕಸಭೆಯಲ್ಲಿ ಮೊದಲ ಬಾರಿಗೆ ‘ಇಂಡಿಯಾ’ ಫಲಕಗಳು ಪ್ರತ್ಯಕ್ಷ

Update: 2023-07-21 16:33 GMT

ಲೋಕಸಭೆ | Photo: PTI

ಹೊಸದಿಲ್ಲಿ: ಹೊಸದಾಗಿ ರಚನೆಗೊಂಡಿರುವ ಪ್ರತಿಪಕ್ಷ ಮೈತ್ರಿಕೂಟದ ಸದಸ್ಯರು ಶುಕ್ರವಾರ ಮಣಿಪುರದಲ್ಲಿಯ ಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹೇಳಿಕೆಗೆ ಆಗ್ರಹಿಸಿದ ಸಂದರ್ಭದಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ‘ಇಂಡಿಯಾ’ ಫಲಕಗಳನ್ನು ಪ್ರದರ್ಶಿಸಿದರು.

ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ‘ಇಂಡಿಯಾ ಉತ್ತರವನ್ನು ಬಯಸುತ್ತದೆ,ಮೌನವನ್ನಲ್ಲ ’ ಮತ್ತು ‘ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕೆಂದು ಇಂಡಿಯಾ ಬಯಸುತ್ತದೆ ’ ಎಂಬ ಫಲಕಗಳನ್ನು ಹಿಡಿದುಕೊಂಡು ಸದನದ ಬಾವಿಗೆ ನುಗ್ಗಿದರು.

ಪ್ರತಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಹೊತ್ತ ಫಲಕಗಳು ಲೋಕಸಭೆಯಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ ಜು.24ರಂದು ಸಂಸತ್ ಸಂಕೀರ್ಣದಲ್ಲಿಯ ಗಾಂಧಿ ಪ್ರತಿಮೆಯ ಬಳಿ ಜಂಟಿ ಧರಣಿಯನ್ನು ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News