ಆರ್‌ಜೆಡಿಗೆ ಮಾಜಿ ಸಚಿವ ರಜಕ್ ಗುಡ್‌ಬೈ

Update: 2024-08-22 14:49 GMT

ಶ್ಯಾಮ ರಜಕ್ | PC :  X \ @ShyamRajakBihar

ಪಾಟ್ನಾ : ಆರ್‌ಜೆಡಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಹಾರದ ಮಾಜಿ ಸಚಿವ ಶ್ಯಾಮ ರಜಕ್ ಅವರು ಗುರುವಾರ ಪಕ್ಷವನ್ನು ತೊರೆದಿದ್ದು,‘ನಾನು ವಂಚನೆಗೊಳಗಾದೆ ಎಂಬ ಭಾವನೆ ನನ್ನನ್ನು ಕಾಡುತ್ತಿತ್ತು’ಎಂದು ಹೇಳಿದ್ದಾರೆ.

ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಬರೆದಿರುವ ಕಟುವಾದ ಪತ್ರದಲ್ಲಿ ರಜಕ್,ತಾನು ಪಕ್ಷದ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವವನ್ನು ತೊರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

‘ನನಗೆ ಚದುರಂಗ ಆಟದಲ್ಲಿ ಆಸಕ್ತಿ ಇರಲಿಲ್ಲ, ಹೀಗಾಗಿ ವಂಚನೆಗೊಳಗಾದೆ. ನೀವು ನಿಮ್ಮ ಕಾಯಿಗಳನ್ನು ಮುನ್ನಡೆಸುವ ಯೋಜನೆಯನ್ನು ಮಾಡುತ್ತಿದ್ದೀರಿ, ಆದರೆ ನಾನು ನಮ್ಮ ಸಂಬಂಧದ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದೆ’ ಎಂದು ರಜಕ್ ಪತ್ರದಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News