ಗುಜರಾತ್: ಸೇತುವೆ ಕುಸಿತ, 10 ಮಂದಿ ನೀರು ಪಾಲು

Update: 2023-09-24 17:41 GMT

                                                                        Photo: X \ @yuvnique

ಗಾಂಧಿನಗರ: ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ವಸ್ತಾದಿ ಪ್ರದೇಶದಲ್ಲಿ ರವಿವಾರ ಹಳೆಯ ಸೇತುವೆಯೊಂದು ಕುಸಿದು ಡಂಪರ್ ಹಾಗೂ ಮೋಟಾರುಸೈಕಲ್‌ಗಳ ಸಹಿತ ಹಲವು ವಾಹನಗಳು ನೀರು ಪಾಲಾಗಿವೆ.

ಈ ದುರಂತದಲ್ಲಿ ಕನಿಷ್ಠ 10 ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. 4 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ 6 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಪೊಲೀಸರು ಹಾಗೂ ಸರಕಾರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣೆಗೆ ಒಳಗಾದವರನ್ನು ಸಮೀಪದ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.

ಭೋಗಾವೊ ನದಿ ಮೇಲಿನ ಈ ಸೇತುವೆ ರಾಷ್ಟ್ರೀಯ ಹೆದ್ದಾರಿಯನ್ನು ಚುರಾ ತಾಲೂಕಿಗೆ ಸಂಪರ್ಕ ಕಲ್ಪಿಸುತ್ತದೆ. ತುಂಬಾ ಹಳೆಯದಾದ ಈ ಸೇತುವೆಯಲ್ಲಿ ಭಾರೀ ವಾಹನಗಳು ಸಂಚರಿಸದಂತೆ ಆಡಳಿತ ನಿರ್ಬಂಧ ವಿಧಿಸಿತ್ತು ಎಂದು ಜಿಲ್ಲಾಧಿಕಾರಿ ಕೆ.ಸಿ. ಸಂಪತ್ ತಿಳಿಸಿದ್ದಾರೆ.

ಡಂಪರ್ ಸಂಚರಿಸಲು ಪ್ರಯತ್ನಿಸಿದ ಸಂದರ್ಭ ಸೇತುವೆ ಕುಸಿದಿದೆ. ಈ ಸೇತುವೆಯನ್ನು ಈಗಾಗಲೇ ರಸ್ತೆ ಹಾಗೂ ಕಟ್ಟಡ ಇಲಾಖೆಗೆ ಹಸ್ತಾಂತರಿಸಲಾಗಿದೆ. ನೂತನ ಸೇತುವೆ ನಿರ್ಮಾಣ ಮಾಡಲು ಅನುಮತಿ ಕೂಡ ದೊರೆತಿದೆ ಎಂದು ಸಂಪತ್ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News