ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಪ್ಪುಹಣ ಬಿಳುಪು ಹಗರಣ : 18 ಸ್ಥಳಗಳಲ್ಲಿ ಈಡಿ ದಾಳಿ

Update: 2024-01-23 17:06 GMT

Photo: ANI 

ಚಂಡೀಗಢಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆಯೆನ್ನಲಾದ ನಕಲಿ ಮರುಪಾವತಿ ಹಗರಣಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಈಡಿ)ವು ಮಂಗಳವಾರ ಚಂಡೀಗಡ, ಮೊಹಾಲಿ ಹಾಗೂ  ಪಾಂಚಕುಲಾದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಗರಗಳ 18 ಸ್ಥಳಗಳಲ್ಲಿ ಈಡಿ  ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಸ್ಥಳವೊಂದರ ಮೇಲೂ ದಾಳಿ ಕಾರ್ಯಾಚರಣೆ ನಡೆದಿರುವುದಾಗಿ  ಮೂಲಗಳು ತಿಳಿಸಿವೆ. ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆಯೆನ್ನಲಾದ 70 ಕೋಟಿ ರೂ. ನಕಲಿ ಮರುಪಾವತಿ ಹಗರಣಕ್ಕೆ ಸಂಬಂಧಿಸಿ ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಈಡಿ ಮೂಲಗಳು ತಿಳಿಸಿವೆ.

ಹಗರಣದಲ್ಲಿ ಹೂಡಾದ ಕನಿಷ್ಠ ಆರು ಮಂದಿ ಅಧಿಕಾರಿಗೆಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News