ಹಿಮಾಚಲ ಪ್ರದೇಶ | ಕಾಂಗ್ರೆಸ್ ಶಾಸಕರ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಕಾರ

Update: 2024-03-18 16:04 GMT

ಸುಪ್ರೀಂ ಕೋರ್ಟ್

ಹೊಸದಿಲ್ಲಿ : ಇತ್ತೀಚಿಗೆ ರಾಜ್ಯದಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಅಡ್ಡ ಮತದಾನ ಮಾಡಿದ್ದ ಕಾಂಗ್ರೆಸ್ ನ ಆರು ಬಂಡುಕೋರ ಶಾಸಕರನ್ನು ಅನರ್ಹಗೊಳಿಸಿರುವ ಹಿಮಾಚಲ ವಿಧಾನಸಭಾ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.

ಸ್ಪೀಕರ್ ಕುಲ್ದೀಪ ಸಿಂಗ್ ಪಠಾನಿಯಾ ಅವರ ಕಚೇರಿಗೆ ನೋಟಿಸನ್ನು ಹೊರಡಿಸಿರುವ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಪೀಠವು ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಸರ್ವೋಚ್ಚ ನ್ಯಾಯಾಲಯವು ಅನರ್ಹತೆಯನ್ನು ಪ್ರಶ್ನಿಸಿರುವ ಅರ್ಜಿಯ ಇತ್ಯರ್ಥವು ಬಾಕಿಯುಳಿದಿರುವಂತೆ ಅನರ್ಹ ಶಾಸಕರು ಸದನದ ಕಲಾಪಗಳಲ್ಲಿ ಭಾಗವಹಿಸಲು ಅಥವಾ ಮತದಾನ ಮಾಡಲು ಅನುಮತಿಯನ್ನು ನಿರಾಕರಿಸಿದೆ.

ಮೇ 6ಕ್ಕೆ ವಿಚಾರಣೆಯನ್ನು ನಿಗದಿಗೊಳಿಸಿರುವ ನ್ಯಾಯಾಲಯವು ಅನರ್ಹ ಶಾಸಕರು ತಮ್ಮ ಉತ್ತರಗಳನ್ನು ಸಲ್ಲಿಸಲು ಒಂದು ವಾರದ ಸಮಯಾವಕಾಶವನ್ನು ನೀಡಿದೆ.

ಬಂಡುಕೋರ ಶಾಸಕರಾದ ಸುಧೀರ ಶರ್ಮಾ,ರವಿ ಠಾಕೂರ್, ರಾಜಿಂದರ್ ರಾಣಾ,ಇಂದ್ರದತ್ತ ಲಖನಪಾಲ್,ಚೈತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ ಭುಟ್ಟೋ ಅವರನ್ನು ಫೆ.29ರಂದು ಅನರ್ಹಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News