ಅಕ್ರಮ ಹಣ ವರ್ಗಾವಣೆ ಪ್ರಕರಣ : ಅರವಿಂದ್ ಕೇಜ್ರಿವಾಲ್‌ಗೆ 6ನೇ ಸಮನ್ಸ್ ಜಾರಿ ಮಾಡಿದ ಈಡಿ

Update: 2024-02-14 12:47 GMT

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (PTI)

ಹೊಸದಿಲ್ಲಿ: ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ಹೊಸ ಮತ್ತು 6 ನೇ ಸಮನ್ಸ್ ಜಾರಿ ಮಾಡಿದೆ ಎಂದು ಬುಧವಾರ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ದಿಲ್ಲಿ ಸಿಎಂ ಕೇಜ್ರಿವಾಲ್ ಫೆಬ್ರವರಿ 19 ರಂದು ಈಡಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಪ್ರಕರಣದಲ್ಲಿ ಈಡಿ ಸಮನ್ಸ್‌ಗೆ ಪ್ರತ್ರಿಕ್ರಿಯಿಸದಿರುವುದಕ್ಕೆ ಈಡಿ ಸಲ್ಲಿಸಿದ ದೂರಿನ ಮೇರೆಗೆ ಫೆಬ್ರವರಿ 17 ರಂದು ತನ್ನ ಮುಂದೆ ಹಾಜರಾಗುವಂತೆ ದಿಲ್ಲಿಯ ನ್ಯಾಯಾಲಯವು ಕಳೆದ ವಾರ ಕೇಜ್ರಿವಾಲ್‌ಗೆ ಸೂಚಿಸಿತ್ತು. ಭಾರತೀಯ ಕಂದಾಯ ಸೇವೆ (IRS)ಯ ಮಾಜಿ ಅಧಿಕಾರಿಯಾಗಿರುವ ಕೇಜ್ರೀವಾಲ್ ಗೆ ಈಡಿ ಈ ಪ್ರಕರಣದಲ್ಲಿ ನೀಡುತ್ತಿರುವುದು 6 ನೇ ಸಮನ್ಸ್ ಆಗಿದೆ.

ಈ ಹಿಂದೆ ಜನವರಿ 3, ಜನವರಿ 18 ಮತ್ತು ಫೆಬ್ರವರಿ 2 ಮತ್ತು 2023 ರಲ್ಲಿ ನವೆಂಬರ್ 2, ಡಿಸೆಂಬರ್ 21 ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಈಡಿ ಸಮನ್ಸ್ ನೀಡಿತ್ತು. ಆದರೆ ಕೇಜ್ರಿವಾಲ್ ಈ ಎಲ್ಲಾ ಸಮನ್ಸ್ ಗಳನ್ನು 'ಅಕ್ರಮ' ಎಂದು ಕರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News