ಇಮ್ರಾನ್ ಹೆಸರು ಇಸಿಎಲ್ ಪಟ್ಟಿಗೆ ಸೇರಿಸಲು ಶಿಫಾರಸು
Update: 2023-11-22 18:16 GMT
ಲಾಹೋರ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ಖಾನ್ ಹಾಗೂ ಇತರ 28 ಜನರ ಹೆಸರನ್ನು `ಎಕ್ಸಿಟ್ ಕಂಟ್ರೋಲ್ ಲಿಸ್ಟ್(ಇಸಿಎಲ್)ಗೆ ಸೇರ್ಪಡೆಗೊಳಿಸುವಂತೆ ಪಾಕಿಸ್ತಾನದ ಉಸ್ತುವಾರಿ ಸರಕಾರ ಬುಧವಾರ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಮ್ರಾನ್ ಹಾಗೂ ಇತರ 28 ಮಂದಿ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇರುವುದರಿಂದ ಅವರನ್ನು `ನಿರ್ಗಮನ ನಿಯಂತ್ರಣ ಪಟ್ಟಿ'(ಇಸಿಎಲ್)ಗೆ ಸೇರ್ಪಡೆಗೊಳಿಸುವಂತೆ ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ.