ಕಳೆದ ನಾಲ್ಕು ವಾರಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 52ರಷ್ಟು ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ

Update: 2023-12-23 10:10 GMT

Photo: twitter.com/WHO

ಹೊಸದಿಲ್ಲಿ: ಜಗತ್ತಿನಲ್ಲಿ ಕಳೆದ ನಾಲ್ಕು ವಾರಗಳ ಅವಧಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ 52ರಷ್ಟು ಏರಿಕೆಯಾಗಿದ್ದು ಈ ವೇಳೆ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ 8.5 ಲಕ್ಷ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆದರೆ ಅದಕ್ಕಿಂತಲೂ 28 ದಿನಗಳ ಅವಧಿಗೆ ಹೋಲಿಸಿದಾಗ ಕೋವಿಡ್‌ನಿಂದ ಉಂಟಾದ ಸಾವುಗಳ ಪ್ರಮಾಣದಲ್ಲಿ ಶೇ 8ರಷ್ಟು ಇಳಿಕೆಯಾಗಿದ್ದು ಈ ಅವಧಿಯಲ್ಲಿ ಒಟ್ಟು 3,000 ಸಾವುಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕಳೆದ ನಾಲ್ಕು ವಾರಗಳ ಅವಧಿಯಲ್ಲಿ 1.18 ಲಕ್ಷ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ 1600ಕ್ಕೂ ಅಧಿಕ ಮಂದಿಯನ್ನು ಐಸಿಯುವಿಗೆ ದಾಖಲಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೋವಿಡ್-19ನ ಹೊಸ ರೂಪಾಂತರಿ ಜೆಎನ್‌.1 ನಿಂದಲೇ ಸೋಂಕು ಅತಿ ವೇಗದಲ್ಲಿ ಹರಡುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಜೆಎನ್.‌ 1 ಸಹಿತ ಇತರ ರೂಪಾಂತರಿಗಳ ವಿರುದ್ಧ ಕೋವಿಡ್‌ ಲಸಿಕೆಗಳು ಪರಿಣಾಮಕಾರಿ ರಕ್ಷಣೆ ನೀಡುತ್ತವೆ ಹಾಗೂ ರೋಗದ ತೀವ್ರತೆ ಮತ್ತು ಸಾವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಹೆಚ್ಚು ಜನಜಂಗುಳಿಯಿರುವ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಕೆಮ್ಮುವಾಗ, ಸೀನುವಾಗ ಇತರರಿಂದ ದೂರ ಇರುವುದು ಹಾಗೂ ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮುಂತಾದ ಮುಂಜಾಗರೂಕತಾ ಕ್ರಮಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News