ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಏರಿಕೆ

Update: 2023-07-04 17:40 GMT

ಸಾಂದರ್ಭಿಕ ಚಿತ್ರ \ Photo: PTI

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ LPG ಸಿಲಿಂಡರ್ ಗಳ ಬೆಲೆಯನ್ನು ಮಂಗಳವಾರ ಏಳು ರೂ.ಗಳಷ್ಟು ಹೆಚ್ಚಿಸಿವೆ.

ಇದರಿಂದಾಗಿ ದಿಲ್ಲಿಯಲ್ಲಿ 19 ಕೆ.ಜಿ.ಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ನ ಬೆಲೆ 1,773 ರೂ.ಗಳಿಂದ 1,780 ರೂ.ಗಳಿಗೆ ಏರಿಕೆಯಾಗಿದೆ. ಆದರೆ ಗೃಹಬಳಕೆ LPG ಸಿಲಿಂಡರ್ ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಈ ಹೆಚ್ಚಳದ ಬಳಿಕ ವಾಣಿಜ್ಯ LPG ಸಿಲಿಂಡರ್ ನ ಬೆಲೆ ಮುಂಬೈನಲ್ಲಿ 1773.50 ರೂ.ಗಳಿಂದ 1780.50 ರೂ.ಗಳಿಗೆ, ಚೆನ್ನೈನಲ್ಲಿ 1,945 ರೂ.ಗಳಿಂದ 1,952 ರೂ.ಗಳಿಗೆ ಮತ್ತು ಕೋಲ್ಕತಾದಲ್ಲಿ 1,895 ರೂ.ಗಳಿಂದ 1902 ರೂ.ಗಳಿಗೆ ಏರಿಕೆಯಾಗಿದೆ.

ವಾಣಿಜ್ಯ LPG ಸಿಲಿಂಡರ್ ಗಳ ಬೆಲೆಯನ್ನು ಈ ವರ್ಷದ ಎಪ್ರಿಲ್ ನಲ್ಲಿ 91.50 ರೂ.,ಮೇ ತಿಂಗಳಿನಲ್ಲಿ 172 ರೂ. ಮತ್ತು ಜೂನ್ ನಲ್ಲಿ 83 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು.

ಇದಕ್ಕೂ ಮುನ್ನ ಈ ವರ್ಷದ ಮಾರ್ಚ್ ನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 350.50 ರೂ. ಮತ್ತು ಗೃಹಬಳಕೆ LPG ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News