ಭಾರತದ ಜಲಾಂತರ್ಗಾಮಿ ನೌಕೆಯಿಂದ ಕ್ಷಿಪಣಿ ಉಡಾವಣೆ ಯಶಸ್ವಿ

Update: 2024-11-28 12:43 GMT

PC : ndtv

ಹೊಸದಿಲ್ಲಿ : ಜಲಾಂತರ್ಗಾಮಿ ಐಎನ್ಎಸ್ ಅರಿಘಾಟ್‌ನಿಂದ ಭಾರತ ಪರಮಾಣು ಸಾಮರ್ಥ್ಯದ 3,500 ಕಿ.ಮೀ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಸೇರ್ಪಡೆಗೊಂಡಿದ್ದ ಭಾರತದ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಘಾಟ್‌ನಿಂದ 3,500 ಕಿ.ಮೀ.ಗಳ ವ್ಯಾಪ್ತಿಯ ಪರಮಾಣು ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಇಲಾಖೆ ಮೂಲಗಳ ಪ್ರಕಾರ, ಪರೀಕ್ಷಾ ಫಲಿತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ. ನಂತರ ಸಂಬಂಧಿಸಿದ ಅಧಿಕಾರಿಗಳು ಉನ್ನತ ಮಿಲಿಟರಿ ಮತ್ತು ರಾಜಕೀಯ ನಾಯಕರಿಗೆ ಮಾಹಿತಿ ನೀಡಲಿದ್ದಾರೆ.

ನೌಕಾಪಡೆಯು ಈಗ ಕ್ಷಿಪಣಿ ವ್ಯವಸ್ಥೆಯ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಿದೆ. ಐಎನ್ಎಸ್ ಅರಿಹಂತ್ ಮತ್ತು ಅರಿಘಾಟ್ ಭಾರತೀಯ ನೌಕಾಪಡೆಯ ಶಸ್ತ್ರಾಗಾರದಲ್ಲಿರುವ ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ .

ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂ ಮೂಲದ ಹಡಗು ನಿರ್ಮಾಣ ಕೇಂದ್ರದಲ್ಲಿ ಆಗಸ್ಟ್‌ನಲ್ಲಿ ಜಲಾಂತರ್ಗಾಮಿ ನೌಕೆಯನ್ನು ಸೇರಿಸಿತ್ತು. ಭಾರತೀಯ ನೌಕಾಪಡೆಯು ಕ್ಷಿಪಣಿ ವ್ಯವಸ್ಥೆಯ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಯೋಜಿಸುತ್ತಿದೆ.

ನೌಕಾಪಡೆಯು ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದ್ದು, ಐಎನ್ಎಸ್ ಅರಿಹಂತ್ ಮತ್ತು ಅರಿಘಾಟ್ ಸೇರಿದಂತೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News